Tuesday, April 13, 2021
Home ಸುದ್ದಿ ಜಾಲ BPL ಕಾರ್ಡ್ ದಾರರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ

ಇದೀಗ ಬಂದ ಸುದ್ದಿ

BPL ಕಾರ್ಡ್ ದಾರರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ

ಬೆಳಗಾವಿ:ರಾಜ್ಯದಲ್ಲಿನ ಬಿಪಿಎಲ್ ಕಾರ್ಡ್ ದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಕಿ ಜೊತೆಗೆ ಜೋಳ ಅಥವಾ ರಾಗಿಯನ್ನು ವಿತರಿಸಲಾಗುವುದು, ಇದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿರುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಶನಿವಾರ ಅವರು ಮಾಧ್ಯಮ ಜೊತೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದರು, ಏಪ್ರಿಲ್ 1ರಿಂದ ಉತ್ತರ ಕರ್ನಾಟಕದಲ್ಲಿ ಜೋಳ ವಿತರಣೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ವಿತರಣೆಗೆ ಸಿದ್ದತೆ ಮಾಡಲಾಗುತ್ತಿದೆ. ಮೂರು ಕೆ.ಜಿ ಅಕ್ಕಿ ಜತೆಗೆ ಎರಡು ಕೆಜಿ ರಾಗಿ, ಜೋಳ ವಿತರಣೆ. ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದರು. ಇದೇ ವೇಳೆ ಅವರು ಒಂದೇ ಪಕ್ಷದಲ್ಲಿ ಇದ್ದು ಎಲ್ಲರೂ ಸ್ನೇಹಿತರೇ. ಲವ್ ಲೇಟರ್ ಬರ್ತಾನೇ ಇರ್ತಾವೆ. ಪಕ್ಷ ವಿರೋಧಿ ಚಟುವಟಿಕೆಯನ್ನು ಯತ್ನಾಳ್ ಮಾಡುತ್ತಿಲ್ಲ ಎಂದಿದ್ದಾರೆ

TRENDING