Saturday, April 17, 2021
Home ಅಂತರ್ ರಾಜ್ಯ ಮಧ್ಯಪ್ರದೇಶದ ವಿಧಿಶಾದಲ್ಲಿ ಸುಷ್ಮಾ ಸ್ವರಾಜ್ ಪ್ರತಿಮೆ ಪ್ರತಿಷ್ಠಾಪನೆ : ಶಿವರಾಜ್ ಸಿಂಗ್ ಚೌಹಾಣ್

ಇದೀಗ ಬಂದ ಸುದ್ದಿ

ಮಧ್ಯಪ್ರದೇಶದ ವಿಧಿಶಾದಲ್ಲಿ ಸುಷ್ಮಾ ಸ್ವರಾಜ್ ಪ್ರತಿಮೆ ಪ್ರತಿಷ್ಠಾಪನೆ : ಶಿವರಾಜ್ ಸಿಂಗ್ ಚೌಹಾಣ್

ಭೂಪಾಲ್: ಮಧ್ಯಪ್ರದೇಶದ ವಿಧಿಶಾದಲ್ಲಿ ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಸುಷ್ಮಾ ಸ್ವರಾಜ್ ವಿಧಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಸುಷ್ಮಾ ಸ್ವರಾಜ್ ಅವರ ಜನ್ಮ ವರ್ಷಾಚರಣೆ ಅಂಗವಾಗಿ ಇಂದು ಭೂಪಾಲ್ ನಲ್ಲಿನ ಅವರ ನಿವಾಸದ ಬಳಿ ದಿವಂಗತ ಬಿಜೆಪಿ ಮುಖಂಡೆ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದ ಚೌಹಾಣ್, ವಿಧಿಶಾದ ಅಭಿವೃದ್ಧಿಗಾಗಿ ಸುಷ್ಮಾ ಸ್ವರಾಜ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿಧಿಶಾದ ಟೌನ್ ಹಾಲ್ ಬಳಿ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.

ಭೂಪಾಲ್ ನಿಂದ 58 ಕಿಲೋ ಮೀಟರ್ ದೂರದಲ್ಲಿರುವ ವಿಧಿಶಾದಿಂದ 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಗೆಲುವು ಸಾಧಿಸಿದ್ದರು. 2019 ಆಗಸ್ಟ್ ಆರರಂದು 67 ನೇ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದರು.

TRENDING