Saturday, April 17, 2021
Home ಕೋವಿಡ್-19 ರಾಜ್ಯದಲ್ಲಿ ಕೊರೊನಾ ಲಸಿಕೆಯ ದ್ವಿತೀಯ ಡೋಸ್‌ ಆರಂಭ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಕೊರೊನಾ ಲಸಿಕೆಯ ದ್ವಿತೀಯ ಡೋಸ್‌ ಆರಂಭ

 ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆಯ 2ನೇ ಡೋಸ್‌ ನೀಡುವ ಪ್ರಕ್ರಿಯೆಯನ್ನು ಸೋಮವಾರ (ಫೆ. 15)ದಿಂದ ಆರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದೇಶಾದ್ಯಂತ ಶನಿವಾರದಿಂದಲೇ 2ನೇ ಹಂತದ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ.

ಕೊರೊನಾ ಲಸಿಕೆಯ ಮೊದಲ ಡೋಸ್‌ ಪಡೆದವರಿಗೆ 28 ದಿನಗಳ ಅನಂತರ ಎರಡನೇ ಡೋಸ್‌ ನೀಡಲಾಗುತ್ತದೆ. ಮೊದಲ ಡೋಸ್‌ ಜ. 16ಕ್ಕೆ ನೀಡಿದ್ದು, ಫೆ. 14ರಿಂದ ಎರಡನೇ ಡೋಸ್‌ ನೀಡಬೇಕಿತ್ತು. ಆದರೆ ಸೋಮವಾರದಿಂದ ರಾಜ್ಯದಲ್ಲಿ ಎರಡನೇ ಡೋಸ್‌ ನೀಡಲಾಗುತ್ತದೆ.

ದ್ವಿತೀಯ ಡೋಸ್ಕಡ್ಡಾಯ
ಮೊದಲ ಡೋಸ್‌ ಪಡೆದ 29ನೇ ದಿನಕ್ಕೆ ಎರಡನೇ ಡೋಸ್‌ ಪಡೆಯಬೇಕೆಂದಿಲ್ಲ. ಒಂದೆರಡು ದಿನ ವ್ಯತ್ಯಾಸವಾದರೂ ತೊಂದರೆಯಾಗುವುದಿಲ್ಲ. ಆದರೆ ಮೊದಲ ಡೋಸ್‌ ಪಡೆದವರು ಎರಡನೇ ಡೋಸ್‌ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುವುದಿಲ್ಲ ಎಂದು ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ ಡಾ| ಬಿ.ಎನ್‌. ರಜನಿ ತಿಳಿಸಿದ್ದಾರೆ.

TRENDING