Saturday, April 17, 2021
Home ಬೆಂಗಳೂರು ‘ನಾನು ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ’ : ಬಿ.ವೈ.ವಿಜಯೇಂದ್ರ

ಇದೀಗ ಬಂದ ಸುದ್ದಿ

‘ನಾನು ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ’ : ಬಿ.ವೈ.ವಿಜಯೇಂದ್ರ

ಬೆಂಗಳೂರು, ಫೆ.14- ದಿನಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.ಬಿ.ವೈ.ವಿಜಯೇಂದ್ರ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದ ಅವರು, ನಾನು ರಾಜ್ಯದ ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ. ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದರು.

ನನ್ನ ಬದುಕು ತೆರೆದ ಪುಸ್ತಕ. ಯಾರು ಬೇಕಾದರೂ ನೋಡಬಹುದು. ಕಾಶಪ್ಪನವರು ಏನಾದರೂ ಮಾತನಾಡಲಿ, ಬಾರ್‍ನಲ್ಲಿ ನಡೆದ ಗಲಾಟೆಯನ್ನು ನಾನು ನೆನಪು ಮಾಡಿದ್ದೆ ಅಷ್ಟೆ. ಮಾಧ್ಯಮದ ಮುಂದೆ ಬಂದು ಯಾರಾದರೂ ಏನಾದರೂ ಮಾತನಾಡಲಿ. ಅವರ ಬಾಯಿ ಮುಚ್ಚಿಸಲು ನಾನಾರು ಎಂದು ಪ್ರಶ್ನಿಸಿದರು.

ನಾನು ಇನ್ನು ಮುಂದೆ ಆ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಒಮ್ಮೆ ಶಾಸಕರಾದವರು ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಹೇಳಿದ್ದೆ ಎಂದು ಮತ್ತೊಮ್ಮೆ ಪ್ರಶ್ನೆಗೆ ಉತ್ತರಿಸಿದರು.

TRENDING