Tuesday, April 13, 2021
Home ಜಿಲ್ಲೆ ಮೈಸೂರು ಮೈಸೂರು : ಬಾರ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ - ಬಿಜೆಪಿ ಯುವಮುಖಂಡ ಸೇರಿ 8...

ಇದೀಗ ಬಂದ ಸುದ್ದಿ

ಮೈಸೂರು : ಬಾರ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ – ಬಿಜೆಪಿ ಯುವಮುಖಂಡ ಸೇರಿ 8 ಮಂದಿಗೆ ಜೈಲು ಶಿಕ್ಷೆ

ಮೈಸೂರು: ಬಾರ್ ನಲ್ಲಿ ಗಲಾಟೆ ಮಾಡಿ ಮಾಲೀಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆ ಬಿಜೆಪಿ ಯುವಮುಖಂಡ ಸೇರಿದಂತೆ 8 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ನಂಜನಗೂಡು ನಗರ ಬಿಜೆಪಿ ಪ್ರಧಾನಕಾರ್ಯದರ್ಶಿ ಧನರಾಜ್ ಸೇರಿದಂತೆ 8 ಮಂದಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ತೀರ್ಪನ್ನು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಪ್ರಕಟವಾಗಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಧನರಾಜ್

2016ರಂದು ನಂಜನಗೂಡಿನ ಅಕ್ಷಯ ಬಾರ್ ನಲ್ಲಿ ಸ್ನೇಹಿತರ ಜೊತೆ ಬಂದು ಗಲಾಟೆ ಮಾಡಿ ಹಲ್ಲೆ ನಡೆಸಿದ್ದ. ಬಿಜೆಪಿ ಯಲ್ಲಿ ಸಕ್ರಿಯನಾಗಿದ್ದ ಧನರಾಜ್ ಗೆ ನಟೇಶ್,ಕುಮಾರ್,ನಂಜಪ್ಪ,ದೇವರಾಜ್,ಮೂರ್ತಿ,ಕೃಷ್ಣ,ಮಂಜು ಸಾಥ್ ನೀಡಿದ್ದರು.ಆರೋಪ ಸಾಬೀತಾದ ಹಿನ್ನಲೆ ೮  ಮಂದಿಗೆ ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ7500 ರೂ ದಂಡ ವಿಧಿಸಲಾಗಿದೆ. ನ್ಯಾಯಾಧೀಶರಾದ ರಾಮಚಂದ್ರ.ಡಿ. ಹುದ್ದಾರ್ ರಿಂದ ತೀರ್ಪು ಪ್ರಕಟವಾಗಿದೆ. ಸರ್ಕಾರದ ಪರ  ಪಿಪಿ ಚಂದ್ರಶೇಖರ್ ವಾದ ಮಂಡಿಸಿದ್ದರು. ಶಾಸಕ ಹರ್ಷವರ್ಧನ್ ಗೆ ಆಪ್ತನಾಗಿರುವ ಧನರಾಜ್ ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.

TRENDING