Saturday, April 17, 2021
Home ಸುದ್ದಿ ಜಾಲ 'ಎಂಆಧಾರ್' ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಇದೀಗ ಬಂದ ಸುದ್ದಿ

‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ.

ಈ ಅಪ್ಲಿಕೇಶನನ್ನು ಯುಐಡಿಎಐ ರಚಿಸಿದೆ. ಈ ಅಪ್ಲಿಕೇಶನ್ ಬಗ್ಗೆ ಯುಐಡಿಎಐ ಈಗ ಮತ್ತೊಂದು ನವೀಕರಣ ಮಾಡಿದೆ. ಇನ್ಮುಂದೆ 5 ಜನರ ಆಧಾರ್ ಕಾರ್ಡ್ ಪ್ರೊಫೈಲ್‌ಗಳನ್ನು ಎಂಆಧಾರ್ ನಲ್ಲಿ ಸೇರಿಸಬಹುದು.

ಅಪ್ಲಿಕೇಶನ್ ಬಗ್ಗೆ ಯುಐಡಿಎಐ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಮೊದಲು ಗರಿಷ್ಠ ಮೂರು ಪ್ರೊಫೈಲ್‌ಗಳನ್ನು ಎಂಆಧಾರ್ ಗೆ ಸೇರಿಸಬಹುದಿತ್ತು. ಬಳಕೆದಾರರ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವಿಳಾಸದ ಜೊತೆಗೆ ಫೋಟೋ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಎಂಆಧಾರ್ ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ಬಳಸಲು, ಬಳಕೆದಾರರು ಹೆಸರು ನೋಂದಾಯಿಸಿಕೊಳ್ಳಬೇಕು.

ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಲು, ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ಲಾಕಿಂಗ್ ವ್ಯವಸ್ಥೆಯನ್ನು ಅಪ್ಲಿಕೇಶನ್‌ನಲ್ಲಿ ನೀಡಲಾಗಿದೆ. ಅಪ್ಲಿಕೇಶನ್‌ನಲ್ಲಿ ಒಟಿಪಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ ನವೀಕರಿಸಲು ಸಹ ಸಾಧ್ಯವಾಗುತ್ತದೆ.

TRENDING