Tuesday, April 13, 2021
Home ಜಿಲ್ಲೆ ಚಿತ್ರದುರ್ಗ ಸಚಿವ ಶ್ರೀರಾಮುಲು ಸಮ್ಮುಖದಲ್ಲೇ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ!

ಇದೀಗ ಬಂದ ಸುದ್ದಿ

ಸಚಿವ ಶ್ರೀರಾಮುಲು ಸಮ್ಮುಖದಲ್ಲೇ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ!

ಚಿತ್ರದುರ್ಗ: ಸಚಿವ ಬಿ. ಶ್ರೀರಾಮುಲು ಮುಂದೆಯೇ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದ ವೇಳೆ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ತಕ್ಷಣ ಪೋಲೀಸರು ಜಾಗೃತವಾಗಿ ಸ್ವಾಮೀಜಿ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ.

ಅಧಿಕಾರ ಹಾಗೂ ಹಣದ ಬಲದಿಂದಾಗಿ ತನಗೆ ನ್ಯಾಯಯುತವಾಗಿ ಸಿಗಬೇಕಿದ್ದ ಪೀಠಾಧಿಕಾರ ಕೈತಪ್ಪಿದೆ ಎಂದು ಸ್ವಾಮೀಜಿ ಸಚಿವ ರಾಮುಲು ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.

ಪಕ್ಷದ ಕಚೇರಿ ಸಮೀಪ ನಡೆದ ಈ ಅಹಿತಕರ ಘಟನೆಯಿಂದಾಗಿ ಸಚಿವ ರಾಮುಲು ಮಾತ್ರ ಕಕ್ಕಾಬಿಕ್ಕಿಯಾಗಿದ್ದರು.

ಇದಕ್ಕೆ ಮುನ್ನ ಚಿತ್ರದುರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು “ಕೇಂದ್ರ ಸರ್ಕಾರವು ಐತಿಹಾಸಿಕ ಬಜೆಟ್ ಮಂಡಿಸಿದ್ದು, 35 ಲಕ್ಷ ಕೋಟಿ ರೂ. ಮೌಲ್ಯದ ಮುಂಗಡಪತ್ರದಲ್ಲಿ ಕೃಷಿ, ಆರೋಗ್ಯ, ವಸತಿ, ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಿದೆ. ಕೇಂದ್ರದ ಮುಂಗಡಪತ್ರದಲ್ಲಿ ಕರ್ನಾಟಕಕ್ಕೂ ಹೆಚ್ಚಿನ ಒತ್ತು ನೀಡಿದ್ದು, ಬೆಂಗಳೂರು ಮೆಟ್ರೋಗೆ 14,735 ಕೋಟಿ ರೂ., ರೈಲ್ವೆ ಯೋಜನೆಗೆ 4,870 ಕೋಟಿ ರೂ., ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ., ಶಿರಾಡಿ ಘಾಟ್ ರಸ್ತೆಗೆ 10 ಸಾವಿರ ಕೋಟಿ ರೂ. ನೀಡಿದೆ.” ಎಂದಿದ್ದಾರೆ.

TRENDING