Saturday, April 17, 2021
Home ಸುದ್ದಿ ಜಾಲ ಈ ಒಂದು ವಿಷಯ ನಿಮಗೆ ಗೊತ್ತಿದ್ದರೇ.. 'ಆನ್ ಲೈನ್ ವಂಚನೆ'ಗೆ ಒಳಗಾಗೋಕೆ ಚಾನ್ಸೇ ಇಲ್ಲ.! ಅದೇನು...

ಇದೀಗ ಬಂದ ಸುದ್ದಿ

ಈ ಒಂದು ವಿಷಯ ನಿಮಗೆ ಗೊತ್ತಿದ್ದರೇ.. ‘ಆನ್ ಲೈನ್ ವಂಚನೆ’ಗೆ ಒಳಗಾಗೋಕೆ ಚಾನ್ಸೇ ಇಲ್ಲ.! ಅದೇನು ಅಂತ ಈ ಸುದ್ದಿ ಓದಿ

ಆನ್ ಲೈನ್ ವಂಚನೆಯ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದ್ರೂ.. ವಂಚನೆ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆದ್ರೇ ವಿವಿಧ ಮಾರಾಟ ಜಾಲತಾಣಗಳಲ್ಲಿ ನೀವು ಹಳೆಯ ವಸ್ತುಗಳನ್ನು ಮಾರಾಟಕ್ಕಾಗಿ ಇಟ್ಟಾಗ, ಈ ಒಂದು ಮಾಹಿತಿ ನಿಮಗೆ ಗೊತ್ತಿದ್ದರೇ, ವಂಚನೆಗೆ ಒಳಗಾಗೋ ಚಾನ್ಸೇ ಇಲ್ಲ. ಆ ಮೂಲಕ ನೀವು ವಂಚನೆಯಿಂದ ಖಂಡಿತವಾಗಿಯೂ ದೂರಾಗಿ ಬಿಡಬಹುದು. ಅದೇನು..? ಹೇಗೆ ವಂಚನೆ ಮಾಡ್ತಾರೆ.? ಎನ್ ಎಚ್ಚರಿಕೆ ವಹಿಸಬೇಕು ಎನ್ನುವ ಬಗ್ಗೆ ಮುಂದೆ ಓದಿ.

ಬೆಂಗಳೂರಿನ ಜೆಪಿ ನಗರದ ನಿವಾಸಿ 35 ವರ್ಷದ ಮಹಿಳೆಯೊಬ್ಬರು ಜನವರಿ 27ರಂದು ತಮ್ಮ ಹಳೆಯ ಫರ್ನಿಚರ್ ಮಾರಾಟಕ್ಕಾಗಿ ಓ ಎಲ್ ಎಕ್ಸ್ ನಲ್ಲಿ ಜಾಹೀರಾತು ನೀಡಿದ್ದಳು. ಇದನ್ನು ಕಂಡಂತ ಅಪರಿಚಿತ ವ್ಯಕ್ತಿಯೊಬ್ಬ, ತಾವು ಖರೀದಿಸುವುದಾಗಿ ತಿಳಿಸಿದ್ದಾನೆ. ಆಕೆಗೆ ಹಳೆಯ ಫರ್ನಿಚರ್ ಮಾರಾಟ ಆಗುವಂತ ಖುಷಿ ಆಗಿದೆ.

ಈ ಬಳಿಕ ಅಸಲಿ ಆಚ ಶುರುಮಾಡಿದಂತ ಆತ, ನಿಮ್ಮ ಹಳೆಯ ಫರ್ನಿಚರ್ ಖರೀದಿಸಲು ಹಣ ಹಾಕುತ್ತಿದ್ದೇನೆ. ನಿಮ್ಮ ಮೊಬೈಲ್ ಸಂಖ್ಯೆಗೆ ಕ್ಯೂ ಆರ್ ಕೋಡ್ ಕಳಿಸಿದ್ದೇನೆ. ಸ್ಕ್ಯಾನ್ ಮಾಡುವಂತೆ ತಿಳಿಸಿದ್ದಾನೆ. ಈ ಮಾತು ನಂಬಿದಂತ ಆಕೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಅಸಲಿ ಆಟ ಶುರುವಾಗಿದೆ. ಈ ಮೂಲಕ ಬರೋಬ್ಬರಿ 5.79 ಲಕ್ಷ ರೂಪಾಯಿಯನ್ನು ಮಹಿಳೆಯ ಖಾತೆಯಿಂದ ಎಗರಿಸಿದ್ದಾನೆ. ಇದರಿಂದಾಗಿ ಆಕೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ಹಣ ವಾಪಾಸ್ ಕೊಡಿಸುವಂತೆ ಮನವಿ ಮಾಡಿದ್ದಾಳೆ.

ಇದು ಅಸರಿ ಕತೆಯಾದ್ರೇ.. ನೀವು ಇಂತಹ ಸಂದರ್ಭದಲ್ಲಿ ಯಾವತ್ತೂ ನೀವು ತಿಳಿದುಕೊಳ್ಳಬೇಕಾದಂತ ಬಹುಮುಖ್ಯ ಮಾಹಿತಿ ಅದ್ರೇ.. ಅದು ನಿಮ್ಮ ವಸ್ತು ಮಾರಾಟ ಮಾಡಲು ವ್ಯಕ್ತಿ ಖರೀದಿಸಲು ಮುಂದಾಗಿದ್ದಾನೆ ಅಂದ್ರೇ, ಹಣ ಸಂದಾಯಕ್ಕಾಗಿ ನೀವು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಕಳಿಸಬೇಕೆ ವಿನಹ, ಅವರಿಂದ ಕಳಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡೋದಲ್ಲ.

ಇನ್ನೂ ಮುಖ್ಯ ವಿಚಾರ ಅಂದ್ರೇ.. ಹಣ ಕಳುಹಿಸಲು ಮಾತ್ರವೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕೆ ಹೊರತು, ಹಣವನ್ನು ಪಡೆಯಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡೋ ಅಗತ್ಯವಿಲ್ಲ. ಇದಲ್ಲದೇ ಹಣ ಪಡೆಯಲು ಯಾವುದೇ ಕಾರಣಕ್ಕೂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ನಂತ್ರ ನಿಮ್ಮ ಯುಪಿಐ ನಂಬರ್ ಎಂಟರ್ ಮಾಡೋ ಅಗತ್ಯವೂ ಇಲ್ಲ. ಜೊತೆಗೆ ಹಣ ಸ್ವೀಕರಿಸಲು ನಿಮ್ಮ ಮೊಬೈಲ್ ನಂಬರ್ ಅಥವಾ ಕ್ಯೂ ಆರ್ ಕೋಡ್ ಅನ್ನು ನೀಡಬೇಕಾಗಿರುತ್ತದೆ.

ಇಂತಹ ಸಾಮಾನ್ಯ ಮಾಹಿತಿಯನ್ನು ನೀವು ಅರಿತಿದ್ದಾಗ ಯಾವುದೇ ಕಾರಣಕ್ಕೂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ವಂಚನೆ ಮಾಡುವಂತ ವಂಚಕರ ಜಾಲಕ್ಕೆ ಸಿಲುಕೋದಿಲ್ಲ. ಸೋ ಈ ಮಾಹಿತಿಯನ್ನು ಅರಿಯೋದು, ಎಚ್ಚರಿಕೆ ವಹಿಸೋದು ಮರೆಯಬೇಡಿ.

TRENDING