Saturday, April 17, 2021
Home ಸುದ್ದಿ ಜಾಲ ಪಡಿತರ ಚೀಟಿ ಹೊಂದಿದವರಿಗೆ ಸಿಹಿ ಸುದ್ದಿ

ಇದೀಗ ಬಂದ ಸುದ್ದಿ

ಪಡಿತರ ಚೀಟಿ ಹೊಂದಿದವರಿಗೆ ಸಿಹಿ ಸುದ್ದಿ

ಬೆಂಗಳೂರು: ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ ಪ್ರಮಾಣ ಕಡಿತಗೊಳಿಸಿ, ಪರ್ಯಾಯವಾಗಿ ರಾಗಿ, ಜೋಳ ಹಾಗೂ ಸ್ಥಳೀಯ ಧಾನ್ಯಗಳನ್ನು ವಿತರಣೆ ಮಾಡುವಂತೆ ನವದೆಹಲಿಯಲ್ಲಿ ಗುರುವಾರ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಖಾತೆ ಸಚಿವ ರಾವ್‌ ಸಾಹೇಬ್‌ ದಾನ್ವೆ ಅವರನ್ನು ಭೇಟಿ ಮಾಡಿದ ಆಹಾರ ಸಚಿವ ಉಮೇಶ್‌ ಕತ್ತಿ ಮನವಿ ಮಾಡಿಕೊಂಡಿದ್ದಾರೆ.

ಸಚಿವರು ಕರ್ನಾಟಕದ ಆಹಾರ ಪದ್ಧತಿಯಲ್ಲಿ ಬಳಸುವ ರಾಗಿ, ಜೋಳ ಮತ್ತು ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕು ಅಂತ ಮನನವಿ ಮಾಡಿಕೊಂಡಿದ್ದು, ಸದ್ಯ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಸರಬರಾಜು ಮಾಡಲಾಗುತ್ತಿದ್ದು, ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಪದ್ಧತಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ನಮ್ಮ ಮನವಿಯನ್ನು ಬೇಗ ಈಡೇರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ. ಇನ್ನೂ ಸಚಿವರ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

TRENDING