Saturday, April 17, 2021
Home ರಾಜ್ಯ ರಾಜ್ಯದ ರೈತರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

ರಾಜ್ಯದ ರೈತರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ

ಬೆಂಗಳೂರು: ರೈತರಗಳು ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯ ಪಡೆಯಲು ಅನುವಾಗುವಂತೆ ಜಿಲ್ಲೆಯಲ್ಲಿ ಆಧಾರ್-ಪಹಣಿ ಜೋಡಣೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈವರೆಗೆ ಆಧಾರ್ ಜೋಡಣೆ ಮಾಡಿಕೊಳ್ಳದ ರೈತರು ತಕ್ಷಣವೇ ಆಧಾರ್-ಪಹಣಿ ಜೋಡಣೆ ಮಾಡಿಕೊಳ್ಳಬೇಕಾಗಿದೆ.

ನೊಂದಣಿ ಮಾಡದೇ ಇರುವ ರೈತರು ತಮ್ಮ ಸಮೀಪದ ಗ್ರಾಮಲೆಕ್ಕಾಧಿಕಾರಿ/ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಇಲ್ಲವೇ ಸಹಾಯಕ ತೋಟಗಾರಿಕಾ ಇಲಾಖೆಯ ಕಛೇರಿಗಳಿಗೆ ಭೇಟಿ ನೀಡಿ ಪಹಣಿ ಪತ್ರಿಕೆ/ ಉತಾರ, ಆಧಾರ್ ಕಾರ್ಡ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಮಾತ್ರ), ಅರ್ಜಿದಾರರ ಕಲರ್ ಭಾವಚಿತ್ರದೊಂದಿಗೆ ದಾಖಲಾತಿಗಳನ್ನು ಸಲ್ಲಿಸಿ FID(Farmer Identification) ಸಂಖ್ಯೆ ಪಡೆದುಕೊಳ್ಳಬೇಕು ಹಾಗೂ ಆಧಾರ ಜೋಡಣೆಯಾಗದ ಎಲ್ಲಾ ರೈತರು ಈ ಕೂಡಲೇ ನೊಂದಣಿ ಮಾಡಿಸಬೇಕಾಗಿದೆ.

ಆಧಾರ್ ಜೋಡಣಿಯಾದರೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗಲಿವೆ. ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ವಿವರವನ್ನು ನೋಂದಾಯಿಸಿ ಗುರುತಿನ ಚೀಟಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಕೂಡ. ಈಗಾಗಲೇ ರಾಜ್ಯದ ಎಲ್ಲೆಡೆ ಈ ಅಭಿಯಾನ ಶುರುವಾಗಿದ್ದು. ರ್ಕಾರದ ಹಲವು ಸೌಲಭ್ಯ ಪಡೆಯಲು ರೈತರು ಜಮೀನಿನ ಪಹಣಿ ಹಾಗೂ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಬೇಕಾಗಿದೆ.

TRENDING