Saturday, April 17, 2021
Home ಸುದ್ದಿ ಜಾಲ ಹರಿಯಾಣದ ರೋಹ್ಟಕ್‌ನ ರೆಸ್ಲಿಂಗ್ ಸೆಂಟರ್ ನಲ್ಲಿ ಗುಂಡಿನ ದಾಳಿ : ಐವರು ಸಾವು

ಇದೀಗ ಬಂದ ಸುದ್ದಿ

ಹರಿಯಾಣದ ರೋಹ್ಟಕ್‌ನ ರೆಸ್ಲಿಂಗ್ ಸೆಂಟರ್ ನಲ್ಲಿ ಗುಂಡಿನ ದಾಳಿ : ಐವರು ಸಾವು

ಚಂಡೀಗಢ: ಹರಿಯಾಣದ ರೋಹ್ಟಕ್‌ನ ರೆಸ್ಲಿಂಗ್ ಸೆಂಟರ್ ನಲ್ಲಿ ನ ಜಿಮ್ನಾಸ್ಟಿಕ್ಸ್ ಹಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು ಹಲವರು ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ತನಿಖೆಗೆ ತಂಡಗಳನ್ನು ರಚಿಸಿದ್ದೇವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಯಾರು ಗುಂಡು ಹಾರಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಲ್ಲಿ ಮೂರು ವರ್ಷದ ಮಗು ಸಹ ಸೇರಿದೆ ಎಂದು ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶರ್ಮಾ ಹೇಳಿದರು.

ಪ್ರಾಥಮಿಕ ಮಾಹಿತಿ ಪ್ರಕಾರ ಕುಸ್ತಿ ತರಬೇತುದಾರನೊಬ್ಬ ಗುಂಡು ಹಾರಿಸಲು ಆರಂಭಿಸಿದ್ದಾನೆ ಎಂದು ಹೇಳಲಾಗಿದ್ದು, ಆದರೆ ಪೊಲೀಸರು ನಿಖರ ಮಾಹಿತಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

TRENDING