Tuesday, April 13, 2021
Home ಸುದ್ದಿ ಜಾಲ ಗೋವಾದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ

ಇದೀಗ ಬಂದ ಸುದ್ದಿ

ಗೋವಾದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ

ಪಣಜಿ, ಫೆ.13: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಕ್ಷಿಪ್ರಗತಿಯಲ್ಲಿ ನಡೆಸಲಾಗುತ್ತಿದೆ. ಗೋವಾದಲ್ಲಿ ರಾಜ್ಯ ಸರ್ಕಾರ ಶನಿವಾರದಿಂದ ಎರಡನೇ ಹಂತದ ಲಸಿಕೆ ವಿತರಣೆ ಅಭಿಯಾನ ಆರಂಭಿಸಿದೆ.

ಕಳೆದ 28 ದಿನಗಳ ಹಿಂದೆ ಯಾರು ಮೊದಲ ಬಾರಿ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದರೋ ಅವರಿಗೆ ಶನಿವಾರದಿಂದ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ರಾಜ್ಯ ಲಸಿಕೆ ವಿತರಣೆ ಮುಖ್ಯಾಧಿಕಾರಿ ಡಾ. ರಾಜೇಂದ್ರ ಬೋರ್ಕರ್ ತಿಳಿಸಿದ್ದಾರೆ.

ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜನವರಿ.16ರಂದು ಆರೋಗ್ಯ ಕಾರ್ಯಕರ್ತ ರಂಗನಾಥ್ ಭೊಜ್ಜೆ ಅವರಿಗೆ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ನ್ನು ನೀಡಲಾಗಿತ್ತು. ಗೋವಾದಲ್ಲೇ ಲಸಿಕೆ ಹಾಕಿಸಿಕೊಂಡ ಮೊದಲ ಆರೋಗ್ಯ ಕಾರ್ಯಕರ್ತನಿಗೇ ಇಂದೂ ಕೂಡಾ ಮೊದಲಿಗೆ ಎರಡನೇ ಡೋಸ್ ಲಸಿಕೆಯನ್ನು ಹಾಕಲಾಯಿತು.

ಗೋವಾದಲ್ಲಿ 10,000ಕ್ಕಿಂತ ಹೆಚ್ಚು ಸಿಬ್ಬಂದಿಗೆ ಮೊದಲ ಲಸಿಕೆ:

ಕೊರೊನಾವೈರಸ್ ಲಸಿಕೆ ಪಡೆಯುವುದಕ್ಕೆ ಗೋವಾದಲ್ಲಿ 19,952 ಆರೋಗ್ಯ ಸಿಬ್ಬಂದಿಯ ಹೆಸರು ಪಟ್ಟಿ ಮಾಡಲಾಗಿದೆ. ಈ ಪೈಕಿ ಶೇ.52ರಷ್ಟು ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಅಂದರೆ 10,341 ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಫೆಬ್ರವರಿ.20ರವರೆಗೂ ಮೊದಲನೇ ಡೋಸ್ ಲಸಿಕೆ ನೀಡುವ ಅಭಿಯಾನ ನಡೆಸಲಾಗುತ್ತದೆ ಎಂದು ಡಾ. ರಾಜೇಂದ್ರ ಬೋರ್ಕರ್ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 79.67 ಮಂದಿಗೆ ಲಸಿಕೆ:

ಭಾರತದಲ್ಲಿ 28 ದಿನಗಳಲ್ಲಿ 79,67,647 ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರದ ಪ್ರಮುಖ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದ್ದು, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. 5,909,136 ಆರೋಗ್ಯ ಸಿಬ್ಬಂದಿ ಮತ್ತು 2,058,511 ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

TRENDING