Saturday, April 17, 2021
Home ಸುದ್ದಿ ಜಾಲ ಮೆಕ್ಸಿಕೋದಲ್ಲಿ ಒಂದೇ ದಿನದಲ್ಲಿ 10,388 ಕೊರೊನಾ ಪ್ರಕರಣಗಳು ಪತ್ತೆ, 1,323 ಜನ ಸಾವು

ಇದೀಗ ಬಂದ ಸುದ್ದಿ

ಮೆಕ್ಸಿಕೋದಲ್ಲಿ ಒಂದೇ ದಿನದಲ್ಲಿ 10,388 ಕೊರೊನಾ ಪ್ರಕರಣಗಳು ಪತ್ತೆ, 1,323 ಜನ ಸಾವು

ಮೆಕ್ಸಿಕೋ : ಕೊರೊನಾವೈರಸ್ (ಕೋವಿಡ್-19) ಅಂಕಿ-ಸಂಖ್ಯೆಗಳ ಪ್ರಕಾರ, ಭಾರತದಲ್ಲಿ ಶುಕ್ರವಾರ 9,309 ಹೊಸ ಪ್ರಕರಣಗಳು ಮತ್ತು 87 ಸಾವುಗಳು ವರದಿಯಾಗಿದ್ದು, ಭಾರತದ ಒಟ್ಟು ಸಂಖ್ಯೆ 10,880,603 ರಷ್ಟಿದೆ. ಶುಕ್ರವಾರ ಒಟ್ಟು 7,65,944 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1.35 ಲಕ್ಷಕ್ಕೆ ಕುಸಿದಿದೆ.

ಕಳೆದ ಕೆಲವು ವಾರಗಳಿಂದ ಪ್ರತಿದಿನ ವರದಿಯಾಗುವ ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ನಿರಂತರವಾಗಿ ಇಳಿಮುಖವನ್ನು ತೋರಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಮೆಕ್ಸಿಕೋದಲ್ಲಿ ಕೊರೋನಾ ಪ್ರಕರಣ ಮತ್ತು ಸಾವಿನ ಪ್ರಕರಣ ಏರಿಕೆಯಾಗುತ್ತಿದೆ. ಮೆಕ್ಸಿಕೋದ ಆರೋಗ್ಯ ಸಚಿವಾಲಯ ಶುಕ್ರವಾರ 10,388 ಹೊಸ ದೃಢಪಟ್ಟ ಕೊರೊನಾವೈರಸ್ ಪ್ರಕರಣಗಳು ಮತ್ತು ಕೊವಿಡ್-19 ನಿಂದ 1,323 ಸಾವುಗಳನ್ನು ವರದಿ ಮಾಡಿದೆ, ಒಟ್ಟಾರೆ ಯಾಗಿ 1,978,954 ಪ್ರಕರಣಗಳು ಮತ್ತು 172,557 ಸಾವುಗಳು ಸಂಭವಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

TRENDING