Saturday, April 17, 2021
Home ಕೋವಿಡ್-19 ರಾಜ್ಯದಲ್ಲಿ ಮತ್ತೆ ನಾಲ್ವರಿಗೆ ರೂಪಾಂತರ ವೈರಾಣು ಪತ್ತೆ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಮತ್ತೆ ನಾಲ್ವರಿಗೆ ರೂಪಾಂತರ ವೈರಾಣು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಾಲ್ವರಿಗೆ ರೂಪಾಂತರ ವೈರಾಣು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೊಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಶುಕ್ರವಾರ ಸಹ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಶುಕ್ರವಾರಕ್ಕೆ ಅನ್ವಯವಾಗುವಂತೆ ಕಳೆದ 24 ಗಂಟೆಯಲ್ಲಿ ಹೊಸದಾಗಿ 380 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾಂದ 8 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಅಂತ ತಿಳಿಸಿದೆ.

ಬೆಂಗಳೂರು ನಗರ ಒಂದರಲ್ಲೇ 7 ಕೊರೋನಾ ಸೋಂಕಿತರು ಹಾಗೂ ಧಾರವಾಡದಲ್ಲಿ ಒಬ್ಬರು ಸೇರಿದಂತೆ 8 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 12,259ಕ್ಕೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ 181 ಜನರು ಸೇರಿದಂತೆ ರಾಜ್ಯಾದ್ಯಂತ 405 ಕೊರೋನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 5,925 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

TRENDING