Saturday, April 17, 2021
Home ಜಿಲ್ಲೆ ಮೈಸೂರು ಮೈಸೂರು ಮಹಾನಗರ ಪಾಲಿಕೆ ಮೀಸಲಾತಿ ಪ್ರಕಟ : ಸಾಮಾನ್ಯ ಮಹಿಳೆಗೆ ಒಲಿದ ಮೇಯರ್ ಪಟ್ಟ..!

ಇದೀಗ ಬಂದ ಸುದ್ದಿ

ಮೈಸೂರು ಮಹಾನಗರ ಪಾಲಿಕೆ ಮೀಸಲಾತಿ ಪ್ರಕಟ : ಸಾಮಾನ್ಯ ಮಹಿಳೆಗೆ ಒಲಿದ ಮೇಯರ್ ಪಟ್ಟ..!

ಮೈಸೂರು: ಬಹು‌ ನಿರೀಕ್ಷೆಯಿಂದ ಕಾದು ಕುಳಿತಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಚುನಾವಣೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಒಲಿದರೆ, ಉಪ ಮೇಯರ್ ಸಾಮಾನ್ಯ ವಿಭಾಗಕ್ಕೆ ಮೀಸಲಿರಿಸಿ‌ ಸರ್ಕಾರ ಆದೇಶ ಹೊರಡಿಸಿದೆ.

ಸದ್ಯ ಮೀಸಲಾತಿ ಪ್ರಕಟಣೆಯಿಂದ ಪಾಲಿಕೆಯಲ್ಲಿ ರಾಜಕೀಯ ಗರಿಗೆದರಿದೆ. ಯರಾಗ್ತಾರೆ ಸ್ವಚ್ಛ ನಗರಿ ಮೈಸೂರಿನ ಮೊದಲ ಮಹಿಳೆ..? ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಸದ್ಯ ಜಿಲ್ಲೆಯಲ್ಲಿ ರಾಜಕೀಯದಾಟ ಶುರುವಾಗಿದ್ದು, ಮೂರು ಪಕ್ಷಗಳಲ್ಲೂ ಭರ್ಜರಿ ಚುನಾವಣಾ ತಂತ್ರ ರೂಪಿಸಲಾಗುತ್ತಿದೆ

TRENDING