Saturday, April 17, 2021
Home ಜಿಲ್ಲೆ ಮೈಸೂರು ಮೈಸೂರು: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕಿರಿಯ ಇಂಜಿನಿಯರ್‌..!

ಇದೀಗ ಬಂದ ಸುದ್ದಿ

ಮೈಸೂರು: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕಿರಿಯ ಇಂಜಿನಿಯರ್‌..!

ಮೈಸೂರು: ಲಂಚ ಸ್ವೀಕರಿಸುವ ವೇಳೆ ಮೈಸೂರು ಮಹಾನಗರ ಪಾಲಿಕೆ  ಕಿರಿಯ ಎಂಜಿನಿಯರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹತ್ತು ಸಾವಿರ ಹಣವನ್ನ ಲಂಚವಾಗಿ ಪಡೆಯುವ ವೇಳೆ ಸಿಕ್ಕಿಬಿದ್ದ ಚಂದ್ರಶೇಖರ್ ಸಿಕ್ಕಿ ಬಿದ್ದಿದ್ದು, ಮೈಸೂರು ಮಹಾನಗರ ಪಾಲಿಕೆಯ  ವಲಯ ಕಛೇರಿ 7 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆರ್.ಎಸ್.ನಾಯ್ಡುನಗರದ‌ ನಿವಾಸಿ ಗೌರಮ್ಮ ಎಂಬುವವರಿಂದ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರು ದಕ್ಷಿಣ ವಲಯ ಪೋಲಿಸ್ ಅಧೀಕ್ಷಕ ಅರಣಾಂಗ್ಯು ಗಿರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಗೌರಮ್ಮ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪರುಶುರಾಮಪ್ಪ ಅವರು ಕಟ್ಟಡವೊಂದರ ವಿಚಾರವಾಗಿ ಗೌರಮ್ಮ ಎಂಬುವವರಿಗೆ 10 ಸಾವಿರ ಲಂಚ ಕೇಳಿದ್ದ ಚಂದ್ರಶೇಖರ್ ಅವರು ಮುಂಗಡ ಹಣವಾಗಿ ಐದು ಸಾವಿರ ಪಡೆಯುವ ವೇಳೆಯಲ್ಲಿಯೇ ಹಿಡಿದಿದ್ದಾರೆ.

ಸದ್ಯ  7( ಎ) ಪಿಸಿ ಕಾಯ್ದೆ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

TRENDING