Saturday, April 17, 2021
Home ಸುದ್ದಿ ಜಾಲ ಮೈಸೂರಿನ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖತರ್ ನಕ್ ಬೈಕ್ ಕಳ್ಳರ ಬಂಧನ

ಇದೀಗ ಬಂದ ಸುದ್ದಿ

ಮೈಸೂರಿನ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖತರ್ ನಕ್ ಬೈಕ್ ಕಳ್ಳರ ಬಂಧನ

ಮೈಸೂರು: ನಗರದ ಉದಯಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಮಹಮ್ಮದ್ ಶೋಹೇಬ್ (19) ಮೆಕ್ಯಾನಿಕ್ ಅರ್ಬಾಜ್ ಖಾನ್ (19) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 8 ಲಕ್ಷ  ಮೌಲ್ಯದ  8 ದ್ವಿಚಕ್ರ ವಾಹನಗಳು ವಶಪಡಿಸಿಕೊಂಡಿದ್ದಾರೆ.

ರಾತ್ರಿ ಹೊತ್ತಿನಲ್ಲಿ ಮನೆ ಬಳಿ ನಿಲ್ಲಿಸಿದ್ದ ಬೈಕ್‌ಗಳನ್ನ ಖದೀಮರು ಕಳ್ಳತನ ಮಾಡುತ್ತಿದ್ದರು. ಜ.31 ರಂದು ರಾಜೀವನಗರದ ಮೊಹಮ್ಮದ್ ಸಲ್ಮಾನ್ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಉದಯಗಿರಿ ಪೊಲೀಸರಿಗೆ ಉದಯಗಿರಿಯ ಅಲಿ ಉದ್ಯಾನ ಬಳಿ ಬೈಕಿನಲ್ಲಿ  ಬರುತ್ತಿದ್ದ ಇಬ್ಬರು ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದದ್ದು ಕಂಡು ಬಂದಿತ್ತು. ತಕ್ಷಣ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿದೆ. ಆರೋಪಿಗಳು ಉದಯಗಿರಿ, ಎನ್.ಆರ್.ಮೊಹಲ್ಲಾ, ವಿಜಯನಗರ, ನಜರ್‌ಬಾದ್, ಸರಸ್ವತಿಪುರಂ,

ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

TRENDING