Saturday, April 17, 2021
Home ಸುದ್ದಿ ಜಾಲ ʼಆಧಾರ್ʼಕಾರ್ಡ್ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಇದೀಗ ಬಂದ ಸುದ್ದಿ

ʼಆಧಾರ್ʼಕಾರ್ಡ್ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಪ್ರತಿ ಗುರುತಿನ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಚಾಲನಾ ಪರವಾನಗಿಯನ್ನು ಕೂಡ ಇದಕ್ಕೆ ಸೇರಿಸಲಾಗಿದೆ. ಈಗ ಚಾಲನಾ ಪರವಾನಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು ಸುಲಭಗೊಳಿಸಿದೆ. ಇದ್ರ ಅಡಿಯಲ್ಲಿ ನೀವು ಮನೆಯಲ್ಲೇ ಕುಳಿತು ಆಧಾರ್ ಜೊತೆ ಚಾಲನಾ ಪರವಾನಗಿ ಲಿಂಕ್ ಮಾಡಬಹುದು.

ರಾಜ್ಯ ಅಥವಾ ಕೇಂದ್ರ ಪ್ರದೇಶದ ರಸ್ತೆ ಸಾರಿಗೆ ಇಲಾಖೆ ಚಾಲನಾ ಪರವಾನಗಿಯನ್ನು ನೀಡುತ್ತದೆ. ನೀವು ಚಾಲನಾ ಪರವಾನಗಿಯೊಂದಿಗೆ ಆಧಾರ್ ಲಿಂಕ್ ಮಾಡಲು ಮೊದಲು sarathi.parivahan.gov.in ವೆಬ್‌ಸೈಟ್‌ಗೆ ಹೋಗಬೇಕು. ನಂತ್ರ ಪರವಾನಗಿ ಹೊಂದಿರುವ ರಾಜ್ಯವನ್ನು ಆಯ್ಕೆ ಮಾಡಬೇಕು. ಈಗ ಆನ್‌ಲೈನ್‌ನಲ್ಲಿ ಅನ್ವಯಿಸು ಕ್ಲಿಕ್ ಮಾಡಿ. ನಂತರ ಡ್ರೈವಿಂಗ್ ಲೈಸೆನ್ಸ್ ನವೀಕರಣ / ನಕಲು ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ರಾಜ್ಯದ ವಿವರಗಳನ್ನು ಭರ್ತಿ ಮಾಡಿ ಮತ್ತು ಮುಂದುವರಿಸಲು ಕ್ಲಿಕ್ ಮಾಡಿ.

ಇದರ ನಂತರ ಚಾಲನಾ ಪರವಾನಗಿ ಸಂಖ್ಯೆಯನ್ನು ನಮೂದಿಸಿ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ವಿವರಗಳನ್ನು ಪಡೆಯಿರಿ ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ ಚಾಲನಾ ಪರವಾನಗಿ ವಿವರಗಳನ್ನು ನಮೂದಿಸಿದ ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ 12 ಅಂಕೆ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಸಲ್ಲಿಸಿ. ಇದರ ನಂತರ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಆರ್ ಟಿಒಗೆ ಹೋಗಿ ಕೂಡ ನೀವು ಲಿಂಕ್ ಮಾಡಬಹುದು.

TRENDING