Tuesday, April 13, 2021
Home ದೇಶ ಸರ್ಕಾರ ಸೂಚಿಸಿದ್ದ ಶೇ 97ರಷ್ಟು ಖಾತೆ ಸ್ಥಗಿತಗೊಳಿಸಿದ ಟ್ವಿಟರ್‌

ಇದೀಗ ಬಂದ ಸುದ್ದಿ

ಸರ್ಕಾರ ಸೂಚಿಸಿದ್ದ ಶೇ 97ರಷ್ಟು ಖಾತೆ ಸ್ಥಗಿತಗೊಳಿಸಿದ ಟ್ವಿಟರ್‌

 ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿ ನೀಡಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದ್ದ ಶೇ 97ರಷ್ಟು ಟ್ವಿಟರ್‌ ಖಾತೆ ಮತ್ತು ಪೋಸ್ಟ್‌ಗಳನ್ನು ಟ್ವಿಟರ್‌ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಟ್ವಿಟರ್‌ ಪ್ರತಿನಿಧಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ನಡುವೆ ಬುಧವಾರ ಸಭೆ ನಡೆದಿತ್ತು. ಈ ವೇಳೆ, ಈ ನೆಲದ ಕಾನೂನಿಗೆ ಟ್ವಿಟರ್‌ ಬದ್ಧವಾಗಿರುವುದು ಕಡ್ಡಾಯ. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡುವ ಪ್ರಚೋದನಕಾರಿ ವಿಷಯವನ್ನು ನಿರ್ಬಂಧಿಸಲು ಟ್ವಿಟರ್‌ ಏಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಪ್ರಶ್ನಿಸಿರುವ ಸಚಿವಾಲಯ, ಇದೇ ರೀತಿಯ ಘಟನೆ ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ನಡೆದಾಗ ಕಂಪನಿಯ ಧೋರಣೆಯೇ ಭಿನ್ನವಾಗಿತ್ತು ಎಂದು ತಿಳಿಸಿದೆ.

TRENDING