Saturday, April 17, 2021
Home ಸುದ್ದಿ ಜಾಲ ಕುರುಬರ ಹೋರಾಟದ ಹಿಂದೆ RSS ಕೈವಾಡವಿಲ್ಲ :ಬಿ.ಶ್ರೀರಾಮುಲು

ಇದೀಗ ಬಂದ ಸುದ್ದಿ

ಕುರುಬರ ಹೋರಾಟದ ಹಿಂದೆ RSS ಕೈವಾಡವಿಲ್ಲ :ಬಿ.ಶ್ರೀರಾಮುಲು

 ಗದಗ : ಕುರುಬರ ಹೋರಾಟದ ಹಿಂದೆ ಆರ್​ಎಸ್​ಎಸ್ ಕೈವಾಡವಿಲ್ಲ ಅಂಥ ಸಚಿವ ಬಿ.ಶ್ರೀರಾಮುಲು ಅವರು ಮಾಜಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ಟಾಂಗ್ ನೀಡಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬೇರೆ ವಿಷಯ ಇಲ್ಲ. ಹೀಗಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಆರ್​ಎಸ್​ಎಸ್​ಗೆ ಇಂತಹ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಅದು ದೇಶ ಸೇವೆ ಮಾಡುವ ಕೆಲಸ ಮಾಡುತ್ತಿದೆ ಹೀಗಾಗಿ ಕುರುಬರ ಹೋರಾಟದ ಹಿಂದೆ ಆರ್​ಎಸ್​ಎಸ್ ಕೈವಾಡವಿಲ್ಲ ಅಂಥ ಹೇಳಿದರು. ಇನ್ನೂ, ರಾಜ್ಯ ಕಾಂಗ್ರೆಸ್​ನಲ್ಲಿ ಸಾಕಷ್ಟು ಒಡಕು ಇದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುತ್ತಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾರೆ ಅಲ್ಲಿ ಎಲ್ಲವೂ ಸರಿ ಇಲ್ಲ ಅಂಥ ಕಾಂಗ್ರೆಸ್‌ ವಿರುದ್ದ ವ್ಯಂಗ್ಯವಾಡಿದರು.

TRENDING