Tuesday, April 13, 2021
Home ದೇಶ ಸತತ ನಾಲ್ಕನೇ ದಿನವೂ ಪೆಟ್ರೋಲ್ , ಡೀಸೆಲ್ ದರದಲ್ಲಿ ಏರಿಕೆ!

ಇದೀಗ ಬಂದ ಸುದ್ದಿ

ಸತತ ನಾಲ್ಕನೇ ದಿನವೂ ಪೆಟ್ರೋಲ್ , ಡೀಸೆಲ್ ದರದಲ್ಲಿ ಏರಿಕೆ!

 ನವದೆಹಲಿ: ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯದ ತೈಲ ರಿಟೈಲರ್ಸ್ ಗಳ ಪ್ರಕಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 31 ಪೈಸೆ ಹಾಗೂ ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.

ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಕಾಲಿಕ ದಾಖಲೆ ಎಂಬಂತೆ ಲೀಟರ್ ಪೆಟ್ರೋಲ್ ದರ 88.14 ಪೈಸೆಯಾದರೆ, ಮುಂಬೈಯಲ್ಲಿ 94. 64 ಪೈಸೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 78.38 ಪೈಸೆಯಷ್ಟಿದ್ದು, ಮುಂಬೈಯಲ್ಲಿ 85. 35 ಪೈಸೆಗೆ ಹೆಚ್ಚಳವಾಗಿದೆ.

ನಾಲ್ಕು ದಿನಗಳಲ್ಲಿ ಲೀಟರ್ ಪೆಟ್ರೋಲ್ 1 ರೂ. 21 ಪೈಸೆ ಮತ್ತು ಲೀಟರ್ ಡೀಸೆಲ್ 1.25 ಪೈಸೆಯಷ್ಟು ಏರಿಕೆಯಾಗಿದೆ. ದರ ತಗ್ಗಿಸಲು ಅಬಕಾರಿ ಸುಂಕವನ್ನು ಇಳಿಕೆ ಮಾಡುವುದನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಸಂಸತ್ತಿನಲ್ಲಿ ತಿಳಿಸಿದರು.

ಕೋವಿಡ್-19 ಲಸಿಕೆ ಸಿಗುತ್ತಿದ್ದಂತೆ ಒಂದು ವರ್ಷದ ನಂತರ ತೈಲ ಬೆಲೆಯಲ್ಲಿ ಸುಧಾರಣೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಗೆ 61 ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

TRENDING