Tuesday, April 13, 2021
Home ರಾಜಕೀಯ ರಾಜ್ಯಸಭೆಯಲ್ಲೇ ರಾಜೀನಾಮೆ ಘೋಷಿಸಿದ TMC ಸಂಸದ

ಇದೀಗ ಬಂದ ಸುದ್ದಿ

ರಾಜ್ಯಸಭೆಯಲ್ಲೇ ರಾಜೀನಾಮೆ ಘೋಷಿಸಿದ TMC ಸಂಸದ

ತೃಣಮೂಲ ಕಾಂಗ್ರೆಸ್​ ಸಂಸದ ದಿನೇಶ್​ ತ್ರಿವೇದಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತಮಗೆ ಉಸಿರುಗಟ್ಟಿದಂತೆ ಆಗುತ್ತಿದೆ ಎಂದು ದಿನೇಶ್​ ತ್ರಿವೇದಿ ಹೇಳಿದ್ದಾರೆ.

ಮೇಲ್ಮನೆಯನ್ನುದ್ದೇಶಿಸಿ ಮಾತನಾಡಿದ ದಿನೇಶ್​ ತ್ರಿವೇದಿ, ನನ್ನನ್ನ ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದ್ದಕ್ಕೆ ನಾನು ಪಕ್ಷಕ್ಕೆ ಆಭಾರಿಯಾಗಿರುತ್ತೇನೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನ ನಿಲ್ಲಿಸಲು ತಮ್ಮಿಂದ ಏನನ್ನೂ ಮಾಡಲು ಆಗ್ತಿಲ್ಲ. ಹೀಗಾಗಿ ನನಗೆ ಉಸಿರುಗಟ್ಟಿದಂತೆ ಆಗುತ್ತಿದೆ ಎಂದು ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಏನನ್ನ ಮಾಡೋಕೂ ನನ್ನಿಂದ ಸಾಧ್ಯವಾಗ್ತಿಲ್ಲ ಎಂಬ ಕೊರಗಿದೆ. ಈ ಸ್ಥಾನದಲ್ಲಿ ಕುಳಿತು ಕೂಡ ನನ್ನಿಂದ ಏನೂ ಮಾಡಲು ಆಗ್ತಿಲ್ಲ ಅಂದ ಮೇಲೆ ರಾಜೀನಾಮೆ ಕೊಡೋದು ಒಳ್ಳೆದು ಎಂದು ನನ್ನ ಆತ್ಮ ಎಚ್ಚರಿಸುತ್ತಿದೆ. ಆದ್ರೆ ಪಶ್ಚಿಮ ಬಂಗಾಳ ಜನತೆಯ ಸೇವೆಗೆ ಎಂದಿಗೂ ಬದ್ಧ ಎಂದು ಹೇಳಿದ್ದಾರೆ.

ಈ ನಡುವೆ ದಿನೇಶ್​ ತ್ರಿವೇದಿ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದ ಸುದ್ದಿ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

TRENDING