Saturday, April 17, 2021
Home ಜಿಲ್ಲೆ ವಿಜಯಪುರ ಭೀಮಾತೀರದಲ್ಲಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ದಾಳಿ ; 7 ಜನ...

ಇದೀಗ ಬಂದ ಸುದ್ದಿ

ಭೀಮಾತೀರದಲ್ಲಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ದಾಳಿ ; 7 ಜನ ಆರೋಪಿಗಳ ಬಂಧನ

ವಿಜಯಪುರ : ಅಕ್ರಮವಾಗಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ದಾಳಿ ನಡೆಸಿ 3.87.300 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳ ಜೊತೆಗೆ 7 ಜನ ಆರೋಪಿಗಳನ್ನು ಪೋಲೀಸರು ಬಂಧಿಸಿರುವ ಘಟನೆಚಡಚಣ ಪಟ್ಟಣದಲ್ಲಿ ನಡೆದಿದೆ.

ಚಡಚಣ ಪಟ್ಟಣದ ಖೂಬಾ ಮಸೀದಿ ಬಳಿಯ ಶೆಡ್ ನಲ್ಲಿ  ಸುಣ್ಣದ ನೀರು, ತಂಬಾಕು ಹಾಗೂ  ಅಡಕೆ ಚೂರು ಬಳಸಿ ಯಂತ್ರದ ಮೂಲಕ ಕಲಬೆರಿಕೆ ಮಾವಾ ತಯಾರಿಸಿ ಮಾರಾಟ ಮಾಡುತ್ತಿದ್ದ ಶೆಡ್ ಮೇಲೆ  ಇಂಡಿ‌ ಡಿ.ವಾಯ್.ಎಸ್ಪಿ  ಶ್ರೀಧರ ದೊಡ್ಡಿ, ಚಡಚಣ ಪಿಎಸ್ಐ ಸತ್ತಿಗೌಡರ್ ನೇತೃತ್ವದಲ್ಲಿ ದಾಳಿ ನಡೆಸಿ ಚಡಚಣ ಪಟ್ಟಣದ ಹುಸೇನಸಾಬ್ ನದಾಫ್,  ಗಣೇಶ ಮೋರೆ ಬಂಡು ಬುರುಡ, ಹಾವಿನಾಳ ಗ್ರಾಮದ ಪರಶುರಾಮ ವಾಘಮೋರೆ, ಚಡಚಣದ ರಾಜು ವಾಘಮೋರೆ, ಗೌಸ ಕಾಮಲೆ ಹಾಗೂ ಶಂಕರ ಬುರುಡ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 3 ಲಕ್ಷ ರೂ ಬೆಲೆ ಬಾಳುವ 30 ಕೆ.ಜಿ  50 ಚೀಲ ಅಡಿಕೆ ಚೂರು, 33 ಸಾವಿರ ಮೌಲ್ಯದ 10 ಕೆ.ಜಿ ಸುಣ್ಣ ಸೇರಿ ತಂಬಾಕು ಚೀಟುಗಳು, ಮಾವಾ ಪಾಕೀಟ್, ಮಾವಾ ತಯಾರಿಸುವ ಯಂತ್ರ, 6 ಮೊಬೈಲ್ ಸೇರಿ 3.87.300 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ವಿನಾಯಕ ತಂಗಾ

ದಿ ನ್ಯೂಸ್ 24 ಕನ್ನಡ

TRENDING