Saturday, April 17, 2021
Home ಸುದ್ದಿ ಜಾಲ ದ್ವಿತೀಯ PUC ವೇಳಾಪಟ್ಟಿ ರಿಲೀಸ್ : ಮೇ.24ರಿಂದ ಜೂ.16ರವರೆಗೆ ಪರೀಕ್ಷೆ

ಇದೀಗ ಬಂದ ಸುದ್ದಿ

ದ್ವಿತೀಯ PUC ವೇಳಾಪಟ್ಟಿ ರಿಲೀಸ್ : ಮೇ.24ರಿಂದ ಜೂ.16ರವರೆಗೆ ಪರೀಕ್ಷೆ

ಬೆಂಗಳೂರು : ಈಗಾಗಲೇ ಬೋರ್ಡ್ ಪರೀಕ್ಷೆಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಕೂಡ ಬಿಡುಗಡೆ ಗೊಂಡಿದೆ. ಮೇ.24ರಿಂದ ಜೂನ್ 16ರವರೆಗೆ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿದಂತ ಅವರು, ದ್ವಿತೀಯ ಪಿಯುಸಿ ಮೇ 24ರಿಂದ ಜೂನ್ 16ರವರೆಗೆ ನಡೆಸಲು ನಿಗಧಿ ಪಡಿಸಲಾಗಿದೆ. ಮೇ.24ರಂದು ಇತಿಹಾಸ, ಮೇ 26ರಂದು ಭೂಗೋಳ ಶಾಸ್ತ್ರ, ಮೇ 31ರಂದು ಇಂಗ್ಲೀಷ್, ಜೂನ್ 2ರಂದು ರಾಜ್ಯಶಾಸ್ತ್ರ, ಜೂನ್ 3ರಂದು ಜೀವಶಾಸ್ತ್ರ, ಜೂನ್ 4ರಂದು ಅರ್ಥಶಾಸ್ತ್ರ, ಜೂನ್ 7 ರಂದು ಭೌತ ಶಾಸ್ತ್ರ, ಜೂನ್. 10 ರಂದು ಸಮಾಜಶಾಸ್ತ್ರ, ಜೂನ್ 12 ರಂದು ಸಂಖ್ಯಾಶಾಸ್ತ್ರ, ಜೂನ್ 16ರಂದು ಕನ್ನಡ ನಡೆಸಲಾಗುತ್ತೆದೆ ಎಂಬುದಾಗಿ ತಿಳಿಸಿದರು.

TRENDING