Saturday, April 17, 2021
Home ಸುದ್ದಿ ಜಾಲ ರಾಮಮಂದಿರಕ್ಕೆ ಮುಸ್ಲಿಮರಿಂದಲೂ ದೇಣಿಗೆ ಪಡೆಯಲು ಸಿದ್ಧತೆ

ಇದೀಗ ಬಂದ ಸುದ್ದಿ

ರಾಮಮಂದಿರಕ್ಕೆ ಮುಸ್ಲಿಮರಿಂದಲೂ ದೇಣಿಗೆ ಪಡೆಯಲು ಸಿದ್ಧತೆ

ಲಕ್ನೋ,ಫೆ.12: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಮುಸ್ಲಿಮರಿಂದಲೂ ದೇಣಿಗೆ ಸಂಗ್ರಹಿಸಲು ಸಿದ್ಧತೆ ನಡೆಯುತ್ತಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್‌ ಧಾರ್ಮಿಕ ಅಲ್ಪ ಸಂಖ್ಯಾತರಿಂದ ದೇಣಿಗೆ ಸಂಗ್ರಹಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

ಇತ್ತೀಚೆಗಷ್ಟೇ ಕ್ರೈಸ್ತ ಸಮುದಾಯದ ಉದ್ಯಮಿ, ಶಿಕ್ಷಣ ತಜ್ಞರು ಒಂದು ಕೋಟಿ ರೂ. ದೇಣಿಗೆ ನೀಡಿದ್ದರು.ಜ.15ರಂದು ದೇಣಿಗೆ ಸಂಗ್ರಹ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷದ್‌ (ವಿಎಚ್‌ಪಿ) ಚಾಲನೆ ನೀಡಿತು. ಫೆ. 26ರ ಮಾಘ ಪೂರ್ಣಿಮೆಗೆ ಅಭಿಯಾನ ಮುಕ್ತಾಯಗೊಳ್ಳಲಿದೆ.

ದೇಶದ ವಿವಿಧ ಭಾಗಗಳಲ್ಲಿಕಾರ್ಯಕರ್ತರು ಸಂಗ್ರಹಿಸಿದ ದೇಣಿಗೆಯನ್ನು ಬ್ಯಾಂಕ್‌ಗೆ ಜಮಾ ಮಾಡುವುದಕ್ಕಾಗಿ 37 ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ ಎಂದು ಎಂಆರ್‌ಎಂ ಮುಖ್ಯಸ್ಥ ಇಂದ್ರೇಶ್‌ ಕುಮಾರ್‌ ಹೇಳಿದ್ದಾರೆ.

ಮಂದಿರ ನಿಧಿ ಸಮರ್ಪಣೆ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಗುವುದು, ಇದಕ್ಕಾಗಿ ಮಂಚ್‌ ಕಾರ್ಯಕರ್ತರಿಗೆ ಎರಡು ದಿನಗಳ ಅಭಿಯಾನ ನಡೆಸಲಾಗುವುದು.

ಇದು ರಾಮಜನ್ಮಭೂಮಿ. ಇಲ್ಲಿ ಎಲ್ಲಾ ಸಮುದಾಯಗಳೂ ಒಂದೇ, ಹಾಗಾಗಿ ಸಾಮಾಜಿಕ ಮತ್ತು ಧಾರ್ಮಿಕ ವೈರತ್ವಗಳನ್ನು ಅಂತ್ಯಗೊಳಿಸಬೇಕು. ಆ ನಿಟ್ಟಿನಲ್ಲಿ ಯತ್ನ ಮಾಡುತ್ತಿದ್ದೇವೆ. ದೇಶದ ಎಲ್ಲ ಸಮುದಾಯಗಳ ಏಳಿಗೆ ಮಾತ್ರ ಭಾರತೀಯರ ಗುರಿಯಾಗಬೇಕು ಎಂದು ಹೇಳಿದ್ದಾರೆ.

TRENDING