Tuesday, April 13, 2021
Home ಅಂತರ್ ರಾಜ್ಯ ತಮಿಳುನಾಡು ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿಅವಘಡ : ಓರ್ವ ವ್ಯಕ್ತಿ ಸಾವು

ಇದೀಗ ಬಂದ ಸುದ್ದಿ

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿಅವಘಡ : ಓರ್ವ ವ್ಯಕ್ತಿ ಸಾವು

ತಮಿಳುನಾಡು : ವಿರುಧಾನಗರದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಇಂದು ಭಾರಿ ಆಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ವ್ಯಕ್ತಿಯೊಬ್ಬ ಜೀವಂತವಾಗಿ ಸುಟ್ಟು ಹೋಗಿರುವ ಘಟನೆ ಇದೀಗ ನಡೆದಿದೆ.

ತಮಿಳುನಾಡಿನ ವಿರುಧಾನಗರದಲ್ಲಿರುವಂತ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಪಟಾಕಿ ಕಾರ್ಖಾನೆ ಹೊತ್ತಿ ಉರಿಯುತ್ತಿದೆ. ಇಂತಹ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಂತ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಸದ್ಯಕ್ಕೆ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

TRENDING