Saturday, April 17, 2021
Home ಸುದ್ದಿ ಜಾಲ ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ :ನಾಲ್ವರ ದುರ್ಮರಣ

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ :ನಾಲ್ವರ ದುರ್ಮರಣ

 ಪುಣೆ, ಫೆ.12 (ಪಿಟಿಐ)- ಸೋಲಾಪುರ ಜಿಲ್ಲೆಯ ಸಂಗೋಲ- ಪಂಡರಾಪುರ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಎಸ್‍ಯುವಿ ಕಾರು ಮತ್ತು ಸ್ಟೇಷನರಿ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಬಾಲಕಿ ಸೇರಿದಂತೆ ನಾಲ್ವರು ಮೃತಪ್ಟಟ್ಟಿರುವ ಘಟನೆ ನಡೆದಿದೆ. ಕೊಲ್ಲಾಪುರ ಜಿಲ್ಲೆಯ ಚಂದಗಢ ನಿವಾಸಿಗಳು ಪಂಡರಾಪುರದ ವಿಠಲ ದರ್ಶನಕ್ಕಾಗಿ ತೆರುಳುತ್ತಿದ್ದ ಎಸ್‍ಯುವಿಯಲ್ಲಿ ತೆರಳುತ್ತಿದ್ದರು.

ಮುಂಜಾನೆ ಮಂಜಿನಲ್ಲಿ ಕಾರು ವೇಗವಾಗಿ ಚಲಿಸುತ್ತಿತ್ತು. ಮಂದ ಬೆಳಕಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಸ್ಪಷ್ಟವಾಗಿ ಕಂಡುಬಂದಿಲ್ಲದ ಕಾರಣ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪಂಡರಾಪುರ ಸಂಚಾರಿ ಪೂಲೀಸ್ ಠಾಣೆ ಇನ್ಸ್‍ಪೆಕ್ಟರ್ ಕಿರಣ್ ಅವ್ಚಾರ್ ತಿಳಿಸಿದ್ದಾರೆ.

ಬೆಳಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಇಬ್ಬರು ಮಹಿಳೆಯರು, ಒಬ್ಬ ವ್ಯಕ್ತಿ ಸೇರಿದಂತೆ ಬಾಲಕಿ ಮೃತಪಟ್ಟಿದ್ದಾರೆ.
ಮತ್ತೊಬ್ಬರಿಗೆ ತೀವ್ರ ಗಾಯಗೊಂಡಿದ್ದು ಸ್ಥಳೀಯ ಕಾಸೆಗಾಂವ್ ಗ್ರಾಮದ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆವ್ಚರ್ ಹೇಳಿದ್ದಾರೆ.

TRENDING