Saturday, April 17, 2021
Home ರಾಜ್ಯ ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಚಳಿ!

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಚಳಿ!

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಚಳಿಯ ತೀವ್ರತೆ ಹೆಚ್ಚಾಗಿದ್ದು, ಫೆಬ್ರವರಿ 14 ರವರೆಗೆ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಒಣ ಹವೆ ಬೀಸುತ್ತಿರುವುದರಿಂದ ಚಳಿಯ ಅನುಭವವಾಗುತ್ತಿದೆ. ಮೋಡಗಳು ಇಲ್ಲದಿರುವುದರಿಂದ ಚಳಿಯನ್ನು ಹೆಚ್ಚಿಸಿದೆ. ಈ ವಾತಾವರಣ ಫೆಬ್ರವರಿ 14 ರವರೆಗೆ ಇರಲಿದೆ. ನಂತರ ಒಣ ಹವೆ ಕಡಿಮೆಯಾಗಿ ಉಷ್ಣಾಂಶ ಏರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರ ನಡುವೆ ರಾಜ್ಯದ ಸರಾಸರಿ ಉಷ್ಣಾಂಶ 12ರಿಂದ 16 ಡಿಗ್ರಿ ಸೆಲ್ಸಿಯಸ್‌ ಇದೆ. ಶಿವಮೊಗ್ಗದಲ್ಲಿ ಸರಾಸರಿ ಉಷ್ಣಾಂಶ ಕನಿಷ್ಠ 14.8 ಮತ್ತು ಗರಿಷ್ಠ 31.2 ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನು ಬೆಂಗಳೂರು, ಗ್ರಾಮಾಂತರ, ಕೋಲಾರ, ಹಾಸನ, ಕೊಡಗು, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ಧಾರವಾಡ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಉಷ್ಣಾಂಶವು 6 ರಿಂದ 8 ಡಿಗ್ರಿಸೆಲ್ಸಿಯಸ್ ದಾಖಲಾಗಿದೆ.

TRENDING