Tuesday, April 13, 2021
Home ಸುದ್ದಿ ಜಾಲ ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿದರೆ ಗ್ರಾಮೀಣಾಭಿವೃದ್ಧಿ: ಡಾ.ವೀರೇಂದ್ರ ಹೆಗ್ಗಡೆ

ಇದೀಗ ಬಂದ ಸುದ್ದಿ

ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿದರೆ ಗ್ರಾಮೀಣಾಭಿವೃದ್ಧಿ: ಡಾ.ವೀರೇಂದ್ರ ಹೆಗ್ಗಡೆ

ಬೆಂಗಳೂರು : – ಗಾಂಧೀಜಿಯವರ ಕನಸಿನಂತೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಅವಕಾಶ ಕೊಡುವುದರಿಂದ ದೇಶದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಪಾಶ್ಚಾತ್ಯ ಕೈಗಾರಿಕೆಗಳಿಂದ ನಮ್ಮ ಗುಡಿ ಮತ್ತು ಗೃಹ ಕೈಗಾರಿಕೆಗಳು ನಶಿಸಿದೆ. ಇದರಿಂದ ಗ್ರಾಮೀಣ ಕಸಬುಗಳಿಗೆ ಮತ್ತು ಅಲ್ಲಿನ ಪ್ರತಿಭೆಗಳಿಗೆ ಮಾರುಕಟ್ಟೆ ಸಿಗದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶ್ರೀ ಧರ್ಮಸ್ಥಳ ಸಂಸ್ಥೆಯ ಸಿರಿ ಉತ್ಪನ್ನಗಳು ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಕುಟುಂಬಗಳಿಗೆ ಆಸರೆ ಮತ್ತು ಅವರ ಜೀವನಕ್ಕೆ ಒಂದು ಬ್ರಾಂಡ್ ಆಗಿ ಸಿರಿ ಸಂಸ್ಥೆ ಕೆಲಸ ಮಾಡುತ್ತಿದೆ. ಅಂತಹ ವಸ್ತುಗಳನ್ನು ನಮ್ಮ ಸಿರಿ ಸಂಸ್ಥೆ ಖರೀದಿ ಮಾಡಿ ಮಾರುಕಟ್ಟೆಗೆ ತಲುಪಿಸುತ್ತದೆ. ಇದರಲ್ಲಿ ಅತ್ಯಂತ ಅವಶ್ಯಕವಾದ ಸಾಂಬಾರ ಪದಾರ್ಥಗಳು ಅಗರಬತ್ತಿ ಸಿದ್ಧ ಉಡುಪುಗಳು ಮತ್ತು ಇತರ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡಲಾಗುವುದು ಎಂದರು.

ನಟಿ ತಾರಾ ಅನೂರಾಧ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಜನರ ಕಲ್ಯಾಣಕ್ಕಾಗಿ ಇದ್ದರೆ, ಸಿರಿ ಸಂಸ್ಥೆಯು ಮಹಿಳೆಯರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ಕನಸಿನಂತೆ ಆತ್ಮ ನಿರ್ಭರ ಭಾರತ ರೂಪಿಸವಲ್ಲಿ ಈ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ. ಇದರಡಿ 2000ಕ್ಕೂ ಹೆಚ್ಚು ಮಹಿಳಾ ಸಂಘಗಳು ಕೆಲಸ ಮಾಡುತ್ತಿದ್ದು ಮಹಿಳೆಯರ ಮತ್ತು ಗ್ರಾಮೀಣ ಜೀವನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ನಟ ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ಒಂದು ವಸ್ತುವಿಗೆ ಬ್ರಾಂಡ್ ಅತ್ಯಗತ್ಯ ಮಾರುಕಟ್ಟೆಯಲ್ಲಿ ಸಿಗುವ ಹಲವು ಹೆಸರುಗಳಲ್ಲಿ ಬ್ರಾಂಡೆಡ್ ವಸ್ತುವನ್ನು ಯಾರು ಆಯ್ಕೆ ಮಾಡುತ್ತಾರೆ ಒಂದು ಬ್ರಾಂಡೆಡ್ ವಸ್ತು ತಯಾರಿಸಲು ಅವರ ಶ್ರಮ ಮತ್ತು ಅದರ ಹಿಂದಿನ ಉದ್ದೇಶ ಅತಿ ಮುಖ್ಯವಾಗಿರುತ್ತದೆ ಎಂದು ಹೇಳಿದರು.

TRENDING