Tuesday, April 13, 2021
Home ಅಂತರ್ ರಾಜ್ಯ ರಥ ಏರಿ ದೌಲತ್ತು ಮೆರೆಯಲು ಬಿಜೆಪಿ ನಾಯಕರೇನು ದೇವತೆಗಳೇ ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ

ಇದೀಗ ಬಂದ ಸುದ್ದಿ

ರಥ ಏರಿ ದೌಲತ್ತು ಮೆರೆಯಲು ಬಿಜೆಪಿ ನಾಯಕರೇನು ದೇವತೆಗಳೇ ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ

 ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಈಗಾಗಲೇ ಟಿಎಂಸಿಯ ಸಂಸದರು, ಶಾಸಕರು ಸೇರಿದಂತೆ ಹಲವು ನಾಯಕರನ್ನು ಸೆಳೆದುಕೊಂಡಿದೆ.

ಅಲ್ಲದೆ ಬಿಜೆಪಿ ನಾಯಕರು ರಥವೇರಿ ಪ್ರಚಾರ ಕಾರ್ಯವನ್ನು ನಡೆಸಿದ್ದು, ಮಮತಾ ಬ್ಯಾನರ್ಜಿ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ನಾನು ಬಂಗಾಳದ ಹುಲಿ. ಬಿಜೆಪಿ ನಾಯಕರ ಬೆದರಿಕೆಗೆ ಬಗ್ಗುವುದಿಲ್ಲ ಎಂದಿದ್ದಾರೆ.

ಅಲ್ಲದೇ ಬಿಜೆಪಿ ನಾಯಕರ ರಥಯಾತ್ರೆ ಪ್ರಚಾರವನ್ನು ವ್ಯಂಗ್ಯವಾಡಿರುವ ಮಮತಾ ಬ್ಯಾನರ್ಜಿ, ರಥ ಏರಿ ದೌಲತ್ತು ಮೆರೆಯಲು ಬಿಜೆಪಿ ನಾಯಕರೇನು ದೇವತೆಗಳೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿ ನಾಯಕರು ರಥಯಾತ್ರೆ ಮೂಲಕ ಸಮಾಜ ವಿಭಜನೆಯ ಕೆಲಸದಲ್ಲಿ ತೊಡಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

TRENDING