ಹೈದರಾಬಾದ್: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಕಿಡಿ ಕಾರಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ದೆಹಲಿಯ ಗಡಿಯಲ್ಲಿ ಆಂದೋಲನ ನಡೆಸುತ್ತಿರುವವರನ್ನು ಮೋದಿ ಸರ್ಕಾರ ಚೀನಾದ ಪಡೆಗಳಂತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಒವೈಸಿ ‘ಚೀನಾ ನಮ್ಮ 20 ಮಂದಿ ಯೋಧರನ್ನು ಕೊಂದಿದೆ. ಅರುಣಾಚಲ ಪ್ರದೇಶದ ಎಲ್ಎಸಿ ಬಳಿ ಒಂದು ಹಳ್ಳಿಯನ್ನು ನಿರ್ಮಿಸಿದೆ. ಈ ಎಲ್ಲಾ ವಿಚಾರಗಳನ್ನು ಧೈರ್ಯವಾಗಿ ಪ್ರತಿಭಟಿಸುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು.
ದೆಹಲಿಯ ಗಡಿಯಲ್ಲಿ ಕೇಂದ್ರ ಸರ್ಕಾರವು ಭದ್ರತೆ ಕಲ್ಪಿಸುತ್ತಿದೆ ಆದರೆ ಇಂಡೋ-ಚೀನಾ ಗಡಿಯಲ್ಲಿ ಅಲ್ಲ ಎಂದು ಒವೈಸಿ ವ್ಯಂಗ್ಯವಾಡಿದರು. ‘ನಾವು ಟಿಕ್ರಿ ಮತ್ತು ಸಿಂಘುಗಳಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಿದ್ದೇವೆ ಆದರೆ ಅರುಣಾಚಲ ಪ್ರದೇಶದಲ್ಲಿ ಅಲ್ಲ. ಇದು ರೈತರನ್ನು ಚೀನಾದ ಪಡೆಗಳಂತೆ ಕಾಣುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.