Tuesday, April 13, 2021
Home ದೆಹಲಿ ರೈಲು ತಡೆಗೆ ಮುಂದಾದ ರೈತ ಸಂಘಟನೆಗಳು

ಇದೀಗ ಬಂದ ಸುದ್ದಿ

ರೈಲು ತಡೆಗೆ ಮುಂದಾದ ರೈತ ಸಂಘಟನೆಗಳು

ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ರೈತರು ಅಂದು ನಡೆದ ಅಹಿತಕರ ಘಟನೆಗಳ ಕಾರಣಕ್ಕೆ ಗಡಿಭಾಗಕ್ಕೆ ತೆರಳಿ ಮತ್ತೆ ತಮ್ಮ ಹೋರಾಟವನ್ನು ಮುಂದುವರಿಸಿದ್ದರು.

ಇದೀಗ ಹೋರಾಟದ ಮುಂದಿನ ಹಂತವಾಗಿ ಫೆಬ್ರವರಿ 18ರಂದು ದೇಶವ್ಯಾಪಿ ನಾಲ್ಕು ತಾಸುಗಳ ಕಾಲ ರೈಲು ತಡೆ ನಡೆಸಲು ತೀರ್ಮಾನಿಸಿದ್ದು, ಅಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರೈಲು ತಡೆ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

TRENDING