Saturday, April 17, 2021
Home ಸುದ್ದಿ ಜಾಲ ಹಿಂದುಳಿದ ವರ್ಗಗಳ ಚಾಂಪಿಯನ್ ಪಟ್ಟಕ್ಕೆ ಹರಸಾಹಸ : ಮಾಜಿ ಸಿಎಂ ಸಿದ್ಧರಾಮಯ್ಯ ರಿಂದ ಮಾ.13 ರಂದು...

ಇದೀಗ ಬಂದ ಸುದ್ದಿ

ಹಿಂದುಳಿದ ವರ್ಗಗಳ ಚಾಂಪಿಯನ್ ಪಟ್ಟಕ್ಕೆ ಹರಸಾಹಸ : ಮಾಜಿ ಸಿಎಂ ಸಿದ್ಧರಾಮಯ್ಯ ರಿಂದ ಮಾ.13 ರಂದು ದಿಗ್ವಿಜಯ ಯಾತ್ರೆ

ಹಿಂದುಳಿದ ವರ್ಗಗಳ ಚಾಂಪಿಯನ್ ಎಂಬ ಹಣೆಪಟ್ಟಿಯನ್ನು ಉಳಿಸಿಕೊಳ್ಳಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾರ್ಚ್ 13 ರಿಂದ ದಿಗ್ವಿಜಯ ಯಾತ್ರೆ ಆರಂಭಿಸಲಿದ್ದಾರೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲಿದ್ದು ಈ ಎಲ್ಲ ಸಮಾವೇಶಗಳ ಮೂಲಕ ಸಿದ್ಧರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ರಾಜ್ಯ ಕುರುಬರ ಸಂಘ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿರುವ ಈ ಸರಣಿ ಸಮಾವೇಶಗಳ ಪೈಕಿ ಮೊದಲ ಸಮಾವೇಶ ಮಾರ್ಚ್ 13 ರಂದು ಗುಲ್ಬರ್ಗದಲ್ಲಿ ನಡೆಯಲಿದೆ.

ಕುರುಬರು ಸೇರಿದಂತೆ ಹಿಂದುಳಿದ ವರ್ಗಗಳ ಎಲ್ಲ ಒಳಪಂಗಡಗಳು ಈ ಸಮಾವೇಶದಲ್ಲಿ ಭಾಗವಹಿಸಿದರೆ ಸಿದ್ಧರಾಮಯ್ಯ ಅವರ ಹಣೆಗಂಟಿರುವ ಹಿಂದುಳಿದ ವರ್ಗಗಳ ಚಾಂಪಿಯನ್ ಎಂಬ ಪಟ್ಟಿ ಹಾಗೆಯೇ ಮುಂದುವರಿಯಲಿದೆ ಎಂಬುದು ಈ ಸಮಾವೇಶಗಳ ಹಿಂದಿರುವ ಲೆಕ್ಕಾಚಾರ. ಸಿದ್ಧರಾಮಯ್ಯ ಅವರೊಂದಿಗೆ ಹಿಂದುಳಿದ ವರ್ಗಗಳ ಒಳಪಂಗಡಗಳ ಹಲ ನಾಯಕರೂ ಭಾಗವಹಿಸಲಿದ್ದು,ಆ ಮೂಲಕ ಬಿಜೆಪಿಯ ರಣತಂತ್ರಕ್ಕೆ ಉತ್ತರ ನೀಡುವುದು ಆಯೋಜಕರ ಉದ್ದೇಶ ಎಂದು ಮೂಲಗಳು ಹೇಳಿವೆ.

TRENDING