Tuesday, April 13, 2021
Home ಸುದ್ದಿ ಜಾಲ ಪೂರ್ವ ಲಡಾಖ್ ನಲ್ಲಿ ಭಾರತ - ಚೀನಾ ಪರಿಸ್ಥಿತಿ ಕುರಿತು ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿರುವ...

ಇದೀಗ ಬಂದ ಸುದ್ದಿ

ಪೂರ್ವ ಲಡಾಖ್ ನಲ್ಲಿ ಭಾರತ – ಚೀನಾ ಪರಿಸ್ಥಿತಿ ಕುರಿತು ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿರುವ ‘ರಾಜನಾಥ್ ಸಿಂಗ್’

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ಸಂಘರ್ಷದ ಪರಿಸ್ಥಿತಿ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ರಕ್ಷಣಾ ಸಚಿವರ ಕಚೇರಿ ಪ್ರಕಟಿಸಿದೆ.

ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಬೇಡಿಕೆ ಇಟ್ಟ ನಂತರ ಕಚೇರಿಯು ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಇತ್ತೀಚೆಗೆ ‘ಕೇಂದ್ರ ಸಚಿವ ವಿಕೆ ಸಿಂಗ್ ಅವರು ಎಲ್‌ಎಸಿ ಅತಿಕ್ರಮಣಗಳ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕವಾಗಿ ತಿಳಿಸಿದ್ದಾರೆ. ಇದು ಚೀನಾಗೆ ನಮ್ಮ ಚಿತ್ರಣದ ಕುರಿತು ಕಳಂಕ ತರುವ ಅವಕಾಶವನ್ನು ನೀಡುತ್ತದೆ’ ಎಂದು ಹೇಳಿದ್ದರು.

‘ಎಲ್‌ಎಸಿ ಮತ್ತು ವಿ ಕೆ ಸಿಂಗ್ ಹೇಳಿಕೆಯ ಮೇಲೆ ಇತ್ತೀಚಿನ ಪರಿಸ್ಥಿತಿಯ ಕುರಿತು ಬೆಳಕು ಚೆಲ್ಲುವಂತೆ ನಾನು ರಕ್ಷಣಾ ಸಚಿವರನ್ನು ವಿನಂತಿಸುತ್ತೇನೆ’ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದರು.

ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ವಿ ಕೆ ಸಿಂಗ್, ‘ಚೀನಾ 10 ಬಾರಿ ಅತಿಕ್ರಮಣ ಮಾಡಿದ್ದರೆ, ನಾವು ಅದನ್ನು ಕನಿಷ್ಠ 50 ಬಾರಿ ಮಾಡಿರಬೇಕು’ ಎಂದು ಅವರು ಹೇಳಿಕೆ ನೀಡಿದ್ದರು.

TRENDING