Saturday, April 17, 2021
Home ಅಂತರ್ ರಾಷ್ಟ್ರೀಯ ನ್ಯೂಜಿಲ್ಯಾಂಡ್‌ : ಆಳಸಮುದ್ರದಲ್ಲಿ ಪ್ರಬಲ ಭೂಕಂಪನ - ಸುನಾಮಿ ಎಚ್ಚರಿಕೆ

ಇದೀಗ ಬಂದ ಸುದ್ದಿ

ನ್ಯೂಜಿಲ್ಯಾಂಡ್‌ : ಆಳಸಮುದ್ರದಲ್ಲಿ ಪ್ರಬಲ ಭೂಕಂಪನ – ಸುನಾಮಿ ಎಚ್ಚರಿಕೆ

ವೆಲ್ಲಿಂಗ್ಟನ್‌: ಉತ್ತರ ನ್ಯೂಜಿಲ್ಯಾಂಡ್‌ ಬಳಿ ಸಮುದ್ರದ ಆಳದಲ್ಲಿ ಬುಧವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಇದರಿಂದ ಸುನಾಮಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಜಿಯಾಲಜಿಕಲ್‌ ಏಜೆನ್ಸಿ ಎಚ್ಚರಿಸಿದೆ.

ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದ ಸಮುದ್ರದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ದಾಖಲಾಗಿದ್ದು, ರಿಕ್ಟರ್‌ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಏಜೆನ್ಸಿ ತಿಳಿಸಿದೆ.

ವನುವಾತು ಮತ್ತು ಫಿಜಿ ತೀರಕ್ಕೆ 1 ರಿಂದ 3.33 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಲಾಗಿದೆ.

ಇಂಡೊನೇಷ್ಯಾದಲ್ಲಿ ಭೂಕಂಪ

ಪಶ್ಚಿಮ ಇಂಡೊನೇಷ್ಯಾದ ಆಳಸಮುದ್ರದಲ್ಲಿ ಸಹ ಪ್ರಬಲ ಭೂಕಂಪನ ಸಂಭವಿಸಿದೆ. ಆದರೆ, ಸುನಾಮಿ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಸುಮಾತ್ರಾ ದ್ವೀಪದ ಬೆಂಗ್‌ಕುಲು ಪ್ರಾಂತ್ಯದ ಬೆಂಗ್‌ಕುಲು ನಗರದಿಂದ 217 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಕಂಡು ಬಂದಿದೆ. ರಿಕ್ಟರ್‌ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಯುಎಸ್‌ ಜಿಯಾಲಜಿಕಲ್‌ ಸರ್ವೇ ತಿಳಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

TRENDING