Saturday, April 17, 2021
Home ಅಂತರ್ ರಾಜ್ಯ ಉತ್ತರಾಖಂಡದಲ್ಲಿ ಹಿಮಪಾತ: 174 ಜನರು ಕಾಣೆ, 32 ಮೃತದೇಹ ಪತ್ತೆ

ಇದೀಗ ಬಂದ ಸುದ್ದಿ

ಉತ್ತರಾಖಂಡದಲ್ಲಿ ಹಿಮಪಾತ: 174 ಜನರು ಕಾಣೆ, 32 ಮೃತದೇಹ ಪತ್ತೆ

ಉತ್ತರಾಖಂಡ್: ಉತ್ತರಾಖಂಡದಲ್ಲಿ ಹಿಮಪಾತದಿಂದಾಗಿ ಉಂಟಾದ ದುರಂತದಲ್ಲಿ 170 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಕಾರ್ಯವನ್ನು ಚುರುಕುಗೊಳಿಸಲಾಗಿದೆ.

ದುರಂತದ ನಂತರ ಸುರಂಗದಲ್ಲಿ‌ ಸಿಲುಕಿರುವ 25-35 ಜನರ ರಕ್ಷಣಾ ಕಾರ್ಯ ಮುಂದುವರೆದಿದ್ದು, ರಕ್ಷಣಾ ತಂಡಗಳು ಅವರ ರಕ್ಷಣೆಗಾಗಿ ಡ್ರೋನ್‌ಗಳು ಮತ್ತು ರಿಮೋಟ್ ಸೆನ್ಸಿಂಗ್ ಸಾಧನಗಳನ್ನ ಬಳಸಿಕೊಂಡು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಚಮೋಲಿ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಈವರೆಗೆ ವಿವಿಧ ಸ್ಥಳಗಳಲ್ಲಿ 32 ಶವಗಳು ಪತ್ತೆಯಾಗಿದ್ದು, ಈ ಪೈಕಿ ಎಂಟು ಶವಗಳನ್ನ ಗುರುತಿಸಲಾಗಿಲಾಗಿದೆ. ಇನ್ನೂ 174 ಜನರು ಕಾಣೆಯಾಗಿದ್ದಾರೆ ಎಂದು ಡೆಹರಾಡೂನ್‌ನ ರಾಜ್ಯ ತುರ್ತು ನಿಯಂತ್ರಣ ಕೇಂದ್ರ ತಿಳಿಸಿದೆ.

TRENDING