Tuesday, April 13, 2021
Home ಸುದ್ದಿ ಜಾಲ 'ಆನ್ ಲೈನ್'ನಲ್ಲಿ ಉದ್ಯೋಗ ಖಾಲಿ ಇದೆ ಅಂತ ಜಾಹೀರಾತು ನೋಡಿ ಅರ್ಜಿ ಹಾಕೋ ಮುನ್ನಾ ಎಚ್ಚರ….ಯಾಕಂತೀರಾ...

ಇದೀಗ ಬಂದ ಸುದ್ದಿ

‘ಆನ್ ಲೈನ್’ನಲ್ಲಿ ಉದ್ಯೋಗ ಖಾಲಿ ಇದೆ ಅಂತ ಜಾಹೀರಾತು ನೋಡಿ ಅರ್ಜಿ ಹಾಕೋ ಮುನ್ನಾ ಎಚ್ಚರ….ಯಾಕಂತೀರಾ ಈ ಸುದ್ದಿ ಓದಿ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಖಾಲಿ ಇದೆ ಎಂದಾಗ ವೈಯಕ್ತಿಕ ವಿವರಗಳನ್ನು ದಯವಿಟ್ಟು ಹಾಕಬೇಡಿ, ಯುವತಿಯೊಬ್ಬಳು ಫೇಸ್​​ಬುಕ್ ಪೇಜ್‌ನಲ್ಲಿ ಕೆಲಸ ಖಾಲಿ ಇದೆ ಎಂಬ ಲಿಂಕ್‌ನ ಓಪನ್ ಮಾಡಿ ಅಲ್ಲಿ ತನ್ನ ವೈಯಕ್ತಿಕ ಮಾಹಿತಿಯನ್ನು ಹಾಕಿದ್ದಾಳೆ, ಇದನ್ನು ಕಿಡಿಗೇಡಿಯೊಬ್ಬ ಇವರ ಫೋಟೋ, ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಯುವತಿ 500 ರೂಪಾಯಿಗೆ ಮಾರಾಟಕ್ಕಿದ್ದಾಳೆ ಎಂದು ಬರೆದುಕೊಂಡಿದ್ದಾನೆ. ಜೊತೆಗೆ ಮೊಬೈಲ್ ನಂಬರ್ ಸಹ ಹಾಕಿದ್ದು, ಈ ಹಿನ್ನೆಲೆ ಯುವತಿಗೆ ಪ್ರತಿನಿತ್ಯ ಸಾಕಷ್ಟು ಮೊಬೈಲ್ ಕರೆಗಳು ಬರುತ್ತಿದ್ದು, ಮಾನಸಿಕವಾಗಿ ನೊಂದ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.

ಮೈಸೂರು ನಗರದ ನಿರುದ್ಯೋಗಿ ಯುವತಿಯೊಬ್ಬಳು ಫೇಸ್​​ಬುಕ್ ಪೇಜ್‌ನಲ್ಲಿ ಕೆಲಸ ಖಾಲಿ ಇದೆ ಎಂಬ ಲಿಂಕ್‌ನ ಓಪನ್ ಮಾಡಿ ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಗೂ ಮೊಬೈಲ್ ನಂಬರ್ ಹಾಕಿದ್ದಾರೆ. ಆದರೆ, ಇವರ ಫೋಟೋ ತೆಗೆದು ವಂಚಕ ಜಾಲತಾಣಗಳಲ್ಲಿ ಯುವತಿ 500 ರೂಪಾಯಿಗೆ ಮಾರಾಟಕ್ಕೆ ಇದ್ದಾಳೆ, ಎಂದು ಅಪ್ಲೋಡ್ ಮಾಡಿದ್ದಾನೆ.ಈ ಹಿನ್ನೆಲೆ ಮಾನಸಿಕವಾಗಿ ನೊಂದ ಯುವತಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾಳೆ. ಒಟ್ಟಿನಲ್ಲಿ ಮಹಿಳೆಯರು ಈ ಬಗ್ಗೆ ಸಾಕಷ್ಟು ಎಚ್ಚರದಿಂದಿರಬೇಕು.’ಆನ್ ಲೈನ್’ನಲ್ಲಿ ಉದ್ಯೋಗ ಖಾಲಿ ಇದೆ ಅಂತ ಜಾಹೀರಾತು ನೋಡಿ ಅರ್ಜಿ ಹಾಕೋ ಮುನ್ನ ಅದರ ಸತ್ಯಾನುಸತ್ಯತೆ ಬಗ್ಗೆ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.

TRENDING