Sunday, June 13, 2021
Homeಬೆಂಗಳೂರುವಾಲ್ಮೀಕಿ ಜಾತ್ರೆಗೆ ಶಶಿಕುಮಾರ್ ಹೋಗದಿರಲು ಕಾರಣವೇನು..?

ಇದೀಗ ಬಂದ ಸುದ್ದಿ

ವಾಲ್ಮೀಕಿ ಜಾತ್ರೆಗೆ ಶಶಿಕುಮಾರ್ ಹೋಗದಿರಲು ಕಾರಣವೇನು..?

ವಾಲ್ಮೀಕಿ ಸಮಾಜದ ಸ್ವಾಮೀಜಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರೇ ಬಸವೇಶ್ವರ ನಗರದ ತಮ್ಮ ಮನೆಗೆ ಬಂದು ಆಹ್ವಾನವನ್ನು ಕೊಟ್ಟು ಹೋದರೂ ಕನ್ನಡದ ಸುಪ್ರೀಂ ಹೀರೋ ಶಶಿಕುಮಾರ್ ಹರಿಹರದ ವಾಲ್ಮೀಕಿ ಜಾತ್ರೆಗೆ ಏಕೆ ಹೋಗಲಿಲ್ಲ..

ಇದು ಪ್ರಶ್ನೆಯಾಗಿ ಹಲವರನ್ನು ಕಾಡುತ್ತಿರುವುದು ನಿಜ. ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಾಗಿ ಮಿಂಚಿ ಇಂದಿಗೂ ಚಾಲ್ತಿಯಲ್ಲಿರುವ ನಟ ಶಶಿಕುಮಾರ್, 90ರ ದಶಕದಲ್ಲಿ ಪಡ್ಡೆ ಹುಡುಗರ ಫೆವರಿಟ್ ಆಗಲು ಅವರ ಡ್ಯಾನ್ಸ್ ಪ್ರತಿಭೆ ಕಾರಣವಾಗಿತ್ತು.

ಮಹಿಳಾ ಪ್ರೇಕ್ಷಕರು ಅವರ ಹಾಸ್ಯಮಯ ನಟನಾ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದರು. ಸುಮಾರು 150 ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ರಾರಾಜಿಸಿದ ಈ ನಟ ವಾಲ್ಮೀಕಿ ಸಮುದಾಯದಿಂದಲೇ ಬಂದವರು..

ಒಮ್ಮೆ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಅದೇ ಚಿತ್ರದುರ್ಗ ಕೋಟೆಯ ಮೇಲೆ ಸಮುದಾಯದ ಬಾವುಟವನ್ನು ಹಾರಿಸಿದವರು..

ಮುಖ್ಯವಾಗಿ ಸರಳತೆಯನ್ನು ಮೈಗೂಡಿಸಿಕೊಂಡವರು ಶಶಿಕುಮಾರ್. ಅವರು ಏಕೆ ವಾಲ್ಮೀಕಿ ಜಾತ್ರೆಗೆ ಹೋಗಲಿಲ್ಲ ಎಂಬುದಕ್ಕೆ ನಾನಾ ಕಾರಣಗಳಿವೆ. ಮುಖ್ಯವಾಗಿ ಹಿರಿತನ ಹೊಂದಿದ ಈ ನಟನನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಶಶಿಕುಮಾರ್ ಅವರ ಅಭಿಮಾನಿ ಬಳಗ ಆಕ್ರೋಶಗೊಂಡಿದೆ.

‘ವಾಲ್ಮೀಕಿ ರತ್ನ’ಪ್ರಶಸ್ತಿ ಕಿಚ್ಚ ಸುದೀಪ್ ಅವರಿಗೆ ನೀಡಲಾದ ವಿಷಯವೇ ಹೆಚ್ಚು ಸದ್ದು ಮಾಡಿದೆ. ಶಶಿಯಣ್ಣ ನಿಮ್ಮ 30 ವರ್ಷಗಳ ಸೇವೆಯನ್ನು ಇವರು ಪರಿಗಣಿಸಿಲ್ಲ; ನೀವು ಹೋಗಬೇಡಿ ಎಂದು ಅಭಿಮಾನಿ ಬಳಗ ಶಶಿಕುಮಾರ್ ಅವರನ್ನು ಒತ್ತಾಯಿಸಿತಂತೆ..

ಈ ಬಗ್ಗೆ ಶಶಿಕುಮಾರ್ ಏನೂ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ಅಭಿಮಾನಿಗಳ ಒತ್ತಾಯ ಹೀಗಿತ್ತು ಎಂದು ಬಣ್ಣಿಸಿದ್ದಾರೆ ಅಷ್ಟೇ.

ಏನೇ ಆಗಲಿ ಸಮುದಾಯದ ಹಿರಿಯ ನಟ; ಅದರಲ್ಲಿಯೂ ಈಗಲೂ ಜನಪ್ರಿಯತೆ ಉಳಿಸಿಕೊಂಡ ನಟನಿಗೆ ಈ ರೀತಿಯ ಕಡೆಗಣನೆ ಮಾಡಬಾರದಿತ್ತು ಎಂಬುದ ಸಹ ಅಭಿಮಾನಿಗಳ ಅನಿಸಿಕೆಯಾಗಿದೆ.

 ದಿ ನ್ಯೂಸ್24ಕನ್ನಡ

ಬೆಂಗಳೂರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img