Tuesday, March 9, 2021
Home ಸಿನಿಮಾ ರೈತರನ್ನು ನೋಡಿದಾಗ ಮನ ಮಿಡಿಯುತ್ತದೆ: ಶಿವರಾಜ್ ಕುಮಾರ್

ಇದೀಗ ಬಂದ ಸುದ್ದಿ

ರೈತರನ್ನು ನೋಡಿದಾಗ ಮನ ಮಿಡಿಯುತ್ತದೆ: ಶಿವರಾಜ್ ಕುಮಾರ್

ದೇಶವ್ಯಾಪಿ ಪ್ರತಿಭಟನೆಯಲ್ಲಿ ನಿರತವಾಗಿರುವ ರೈತರ ಬಗ್ಗೆ ಕನ್ನಡ ಚಿತ್ರರಂಗ ಮೌನವಾಗಿರುವುದೇಕೆ ಎಂಬುದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ.

ಚಿತ್ರವೊಂದರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಶಿವಣ್ಣ, ರೈತರ ಪ್ರಯತ್ನಗಳನ್ನು ನೋಡಿದಾಗ ಮರುಕವಾಗುತ್ತದೆ. ಅಯ್ಯೋ ಎನಿಸುತ್ತದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದು ಸುಲಭ; ಆದರೆ ನಿಜವಾದ ಪರಿಸ್ಥಿತಿಗಳನ್ನು ತಿಳಿಯುವುದು ಯಾವಾಗಲೂ ಸರಿ ಎನಿಸುತ್ತದೆ..

ನಾನು ಸಹ ಪ್ರತಿಕ್ರಿಯೆ ಕೊಡಬಹುದು; ಆದರೆ ಅದರಿಂದ ಏನು ಲಾಭ; ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಗುವುದಾದರೆ ಕೊಡೋಣ ಎಂದು ಶಿವರಾಜ್ ಕುಮಾರ್ ಉತ್ತರ ನೀಡಿದ್ದಾರೆ.

ರೈತರ ಪ್ರತಿಭಟನೆಯ ಬಗ್ಗೆ ಸ್ಯಾಂಡಲ್ ವುಡ್ ಮೌನವಾಗಿರುವುದೇಕೆ.. ಸ್ಟಾರ್ ನಟರು ಎಲ್ಲಿದ್ದಾರೆ ಎಂಬ ಪ್ರಶ್ನೆಗಳನ್ನು ಕೆಲವರುವ ಎತ್ತಿದ್ದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರ ಈ ಪ್ರತಿಕ್ರಿಯೆ ಗೆ ಮಹತ್ವ ಬಂದಿದೆ.

-ಸ್ನೇಹಪ್ರಿಯ ನಾಗರಾಜ್

ಎಂಟಟೈನ್ ಮೆಂಟ್ ಬ್ಯೂರೋ

ದಿ ನ್ಯೂಸ್24ಕನ್ನಡ

ಬೆಂಗಳೂರು

TRENDING