Saturday, April 17, 2021
Home ಸುದ್ದಿ ಜಾಲ ರಂಗಭೂಮಿ ಪುರಸ್ಕಾರ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಬಿ.ಜಯಶ್ರಿ ಆಯ್ಕೆ

ಇದೀಗ ಬಂದ ಸುದ್ದಿ

ರಂಗಭೂಮಿ ಪುರಸ್ಕಾರ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಬಿ.ಜಯಶ್ರಿ ಆಯ್ಕೆ

 ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯಿಂದ ಕೊಡಮಾಡುವ ರಂಗಭೂಮಿ ಪುರಸ್ಕಾರ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಬಿ.ಜಯಶ್ರಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1967ರಿಂದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ರಂಗಭೂಮಿ ಪುರಸ್ಕಾರ ನೀಡಲಾಗುತ್ತಿದೆ. ಫೆ.13ರಂದು ಸಂಜೆ 5.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಬಿ.ಜಯಶ್ರೀ ಅವರಿಗೆ ‘ರಂಗ ಸಾಮ್ರಾಜ್ಞಿ’ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಅಂದು ಮಧ್ಯಾಹ್ನ 2.30ಕ್ಕೆ ಬಿ.ಜಯಶ್ರೀ ಅವರ ರಂಗ ಬದುಕಿನ ಪಯಣ ಕುರಿತು ವಿಚಾರಗೋಷ್ಠಿ, ಬಳಿಕ ಮುಖಾಮುಖಿ ಕಾರ್ಯಕ್ರಮ ನಡೆಯಲಿದೆ. 14ರಂದು ಸಂಜೆ 5.45ಕ್ಕೆ 41ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

TRENDING