Sunday, February 28, 2021
Home ಸುದ್ದಿ ಜಾಲ ಮಾರುವೇಶದಲ್ಲಿ ಹಕ್ಕಿ ಪಿಕ್ಕಿ ಜನಾಂಗ ಬೇಟೆಯಾಡಿದ ಮುನಿರಾಬಾದ್ ಪೋಲಿಸರು

ಇದೀಗ ಬಂದ ಸುದ್ದಿ

ಮಾರುವೇಶದಲ್ಲಿ ಹಕ್ಕಿ ಪಿಕ್ಕಿ ಜನಾಂಗ ಬೇಟೆಯಾಡಿದ ಮುನಿರಾಬಾದ್ ಪೋಲಿಸರು

ಇವರು ಮೂಲತಃ ಹಕ್ಕಿ ಪಿಕ್ಕಿ ಜನಾಂಗದವರು  ಅಂದ್ರೆ ಅರಣ್ಯ ವಾಸಿಗಳು ಆಗಿದ್ದು ಕೊಪ್ಪಳ ತಾಲೂಕಿನ ಬೂದಗುಂಪದಲ್ಲಿ ಅಪರಿಚಿತ ವ್ಯಕ್ತಿಗೆ ನಿನಗೆ ಒಂದು ಬಂಗಾರದ ಉಂಗುರ ಕೊಡುವೆ ಅದರಿಂದ ನಿನ್ನ ಅದೃಷ್ಟ ಬದಲಾಗುತ್ತೆ ಎಂದು ಹೇಳಿ 20000 ರೂಪಾಯಿ ತೆಗೆದುಕೊಂಡು ಆತನ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು  ಅಲ್ಲಿಂದ ಕಾಲು ಕಿತ್ತು  2ದಿನಗಳ ನಂತರ ಅದೇ ಸಂಖ್ಯೆಗೆ ಕರೆಮಾಡಿ ಕಿನ್ನಾಳ್ ಎಂಬ ಗ್ರಾಮಕ್ಕೆ ಬನ್ನಿ ಕಲ್ ತಾವರಗೇರಾ  ಗ್ರಾಮಕ್ಕೆ ಬನ್ನಿ ನಿಮಗೆ ಅರ್ಧ ಕೆಜಿ ಬಂಗಾರ ಕೊಡುತ್ತೇನೆ ಎಂದು ಆಸೆ ತೋರಿಸುವ ಮುಖಾಂತರ ಅಸಲಿ ಬಂಗಾರವನ್ನು ತೋರಿಸಿ ಖರೀದಿಗೆ ಹೋದಾಗ ನಕಲಿ ಬಂಗಾರವನ್ನು ಮಾರುತ್ತಿದ್ದರು .

ಸ್ಥಳೀಯ ವ್ಯಕ್ತಿಯೊಬ್ಬನ ದೂರಿನ ಆಧಾರದ ಮೇಲೆ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ ಐ ಆಗಿರುವ ಸುಪ್ರೀತ್ ವಿ ಅವರು  ಫೋನ್ ಕರೆಯ ಮುಖಾಂತರ ಬೆಳ್ಳಂಬೆಳಿಗ್ಗೆ ಮಾರುವೇಷದಲ್ಲಿ ಆರೋಪಿಗಳ ಜಾಡನ್ನು ಬೆನ್ನುಹತ್ತಿ  ಅರ್ಧ ಕೆಜಿ ನಕಲಿ ಚಿನ್ನ ಮತ್ತು 2 ಬೈಕ್ ಗಳನ್ನು ಸಮೇತ ವಶಪಡಿಸಿಕೊಳ್ಳುವ ಮುಖಾಂತರ ಯಶಸ್ವಿಯಾಗಿದ್ದಾರೆ .

ಇವರ ಮತ್ತು ಸಿಬ್ಬಂದಿಗಳ ಈ ತಂಡದ ಕಾರ್ಯವನ್ನು ಎಸ್ಪಿ ಟಿ ಶ್ರೀಧರ್ .ಡಿ ವೈಎಸ್ ಪಿ ವೆಂಕಟಪ್ಪ ನಾಯಕ ಮತ್ತು ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡರ್ ಅವರು ಅಭಿನಂದಿಸಿದ್ದಾರೆ .

ಆರೋಪಿತರ ಹೆಸರು ಪೌ ರಾಜು. ಮೇಕೆ ರಾಮಣ್ಣ. ಸಿಪಾಯಿ ಪರಂಧಾಮ. ಸೊ ಿಈ ಪ್ರಕರಣವನ್ನು ಭೇದಿಸಿದ  ನಂತರ ಎಸ್ಪಿ ಟಿ ಶ್ರೀಧರ್ ರವರ ಆದೇಶದ ಮೇರೆಗೆ ನಗರದಲ್ಲಿ ನಕಲಿ ಚಿನ್ನದ ಮಾರಾಟಗಾರರ  ಹಾವಳಿ ಹೆಚ್ಚಾಗುತ್ತಿದ್ದು ಸಾರ್ವಜನಿಕರು ದಯಮಾಡಿ ಜಾಗ್ರತೆಯಿಂದ ಇರಬೇಕು ಎಂಬ ಪೊಲೀಸ್ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ .

 ಮಂಜು ಬಿ ತೋಟಗೇರ್

ದಿ ನ್ಯೂಸ್ ೨೪ ಕನ್ನಡ

 ಕೊಪ್ಪಳ .

TRENDING