Tuesday, March 9, 2021
Home ಸಿನಿಮಾ 25ರ ಸಂಭ್ರಮ ಸಮೂಹದಲ್ಲಿ ಆಚರಿಸಿಕೊಂಡಿದ್ದರು ಶಿವಣ್ಣ

ಇದೀಗ ಬಂದ ಸುದ್ದಿ

25ರ ಸಂಭ್ರಮ ಸಮೂಹದಲ್ಲಿ ಆಚರಿಸಿಕೊಂಡಿದ್ದರು ಶಿವಣ್ಣ

ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕುವುದರಲ್ಲಿಯೂ ಒಂದು ವಿಶೇಷತೆ ಇರುತ್ತದೆ. ಸೆಂಚುರಿ ಸ್ಟಾರ್ ಶಿವಣ್ಣ ಯಾವಾಗಲೂ ಅರಳುವುದು ಸಮೂಹದಲ್ಲೇ. ಹಾಗಾಗಿ ತಮ್ಮ 25 ವರ್ಷದ ಸಂಭ್ರಮವನ್ನು ಸಮೂಹದ ನಡುವೆಯೇ ಆಚರಿಸಿಕೊಂಡಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಷ್ಟು ಸರಳ ವ್ಯಕ್ತಿತ್ವದ ಮಗುವಿನಂತಹ ನಟ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಅವರು ಎಂದಿಗೂ ಸಮೂಹದ ಮೂಲಕವೇ ಅರಳಿದವರು.

ಈಗ ನಾಯಕತ್ವ ವಹಿಸಿಕೊಂಡಿದ್ದಾರೆ.ಅವರು ನಿಜವಾದ ನಾಯಕ ಕೂಡ.. ಏಕೆಂದರೆ ತಂದೆಯಂತೆಯೇ ಸರಳತೆಗೆ ಒತ್ತು ಕೊಟ್ಟು ನಡೆದವರು.

ಅವರು ಸಿನಿಮಾ ರಂಗಕ್ಕೆ ಬಂದು  25 ವರ್ಷಗಳಾದ ಸಂದರ್ಭದಲ್ಲಿ ಇಡೀ ಉದ್ಯಮ ಕರೆದು ಆಚರಿಸಿಕೊಂಡರು.. ಅರಮನೆ ಮೈದಾನದಲ್ಲಿ ನಡೆದ ಆ ಸಂದರ್ಭದಲ್ಲಿ ತಮ್ಮ ಬೆಳವಣಿಗೆ ಹಾದಿಯಲ್ಲಿ ನೆರವಾದವರನ್ನು ಕರೆದು ಸನ್ಮಾನಿಸಿದ್ದರು. ನಿಜಕ್ಕೂ ಅದೊಂದು ಮಾದರಿ ಎನಿಸುವ ಕಾರ್ಯಕ್ರಮ ಆಗಿತ್ತು.

ಹಾಗೆಯೇ ಅದ್ದೂರಿತನದಿಂದಲೂ ಕೂಡಿತ್ತು. ಇಷ್ಟಾದರೂ ಅಲ್ಲಿ ಸರಳತೆ ಇತ್ತು. ಶಿವಣ್ಣ ಈಗಿನ ಸ್ಟಾರ್ ಗಳಂತೆ ಎಂದಿಗೂ ‘ಸ್ಟಾರ್’ಗಿರಿ ಮನೋಭಾವವನ್ನು ಬೆಳೆಸಿಕೊಂಡಿದ್ದೇ ಇಲ್ಲ. ಬಯಲಲ್ಲಿ ಬೇಕಾದರೂ ಕರೆಯಿರಿ ಬಂದು ಮಾತನಾಡುವೆ ಎನ್ನುವಷ್ಟು ಸರಳ ಅವರು. ಪತ್ರಕರ್ತರಿಗೆ ಅವರು ಗ್ರೀನ್ ಹೌಸ್ ಅಥವಾ ರೇಣುಕಾಂಬ ಸ್ಟುಡಿಯೋದಲ್ಲಿ ಸಿಗಬಲ್ಲರು. ಸಂತನಂತೆ ಇರುವ ಈ ಸ್ಟಾರ್ ನಟ ಅದರಲ್ಲಿಯೂ ಅಣ್ಣಾವ್ರ ಮಗ ಎಲ್ಲರಿಗೂ ಮಾದರಿಯಾಗಲಿ.

 

-ಸ್ನೇಹಪ್ರಿಯ ನಾಗರಾಜ್

TRENDING