Tuesday, March 9, 2021
Home ಕ್ರೈಂ ನ್ಯೂಸ್ ಶಾಕಿಂಗ್: ವಾಟ್ಸಾಪ್, ಫೇಸ್ಬುಕ್ ಬಳಕೆ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ.!

ಇದೀಗ ಬಂದ ಸುದ್ದಿ

ಶಾಕಿಂಗ್: ವಾಟ್ಸಾಪ್, ಫೇಸ್ಬುಕ್ ಬಳಕೆ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ.!

ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯೇ ಪತ್ನಿಯನ್ನ ದಾರುಣವಾಗಿ ಕೊಲೆಗೈದ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಯೆರ್ರಪಲೇಂ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ ಎರ್ರಮಲ್ಲಾ ನವ್ಯಾ ಎಂದು ಗುರುತಿಸಲಾಗಿದೆ.

ಕೆಲ ತಿಂಗಳ ಹಿಂದಷ್ಟೇ ಮೃತ ನವ್ಯಾ ಎಂಬಾಕೆ ನಾಗ ಶೇಷು ರೆಡ್ಡಿ ಜೊತೆ ವಿವಾಹವಾಗಿದ್ದಳು. ಆಕೆ ಫೇಸ್​ಬುಕ್​ ಹಾಗೂ ವಾಟ್ಸಾಪ್​ನಲ್ಲಿ ಜಾಸ್ತಿ ಚಾಟ್​ ಮಾಡುತ್ತಾಳೆ ಎಂಬ ಕಾರಣಕ್ಕೆ ಪತಿ ನಾಗ ಶೇಷು ರೆಡ್ಡಿ ಈಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ಪತಿ – ಪತ್ನಿ ನಡುವೆ ಸಾಕಷ್ಟು ಬಾರಿ ಕಲಹ ಏರ್ಪಟ್ಟಿತ್ತು. ಒಂದಿನ ಜಗಳ ತಾರಕಕ್ಕೇರಿದ್ದು ನಾಗ ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಪ್ರಾಥಮಿಕ ಮಾಹಿತಿಯ ಪ್ರಕಾರ ನಾಗ ಆಕೆಗೆ ಬೇರೆಂದು ಸಂಬಂಧವಿದೆ ಎಂದು ಶಂಕಿಸಿ ಈ ಕೊಲೆಗೈದಿದ್ದಾನೆ ಎನ್ನಲಾಗಿದೆ. ಸೂಕ್ತ ತನಿಖೆ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

TRENDING