Saturday, February 27, 2021
Home ಕ್ರೈಂ ನ್ಯೂಸ್ ಕತ್ತು ಸೀಳಿ, ಹಲ್ಲು ಮುರಿದಿರುವ ಭೀಕರ ಸ್ಥಿತಿಯಲ್ಲಿ8 ವರ್ಷದ ಬಾಲಕಿಯ ಶವ ಪತ್ತೆ! ಅತ್ಯಾಚಾರವೂ ನಡೆದಿರುವ...

ಇದೀಗ ಬಂದ ಸುದ್ದಿ

ಕತ್ತು ಸೀಳಿ, ಹಲ್ಲು ಮುರಿದಿರುವ ಭೀಕರ ಸ್ಥಿತಿಯಲ್ಲಿ8 ವರ್ಷದ ಬಾಲಕಿಯ ಶವ ಪತ್ತೆ! ಅತ್ಯಾಚಾರವೂ ನಡೆದಿರುವ ಶಂಕೆ

ಕೋಲ್ಕತ: ಕತ್ತು ಸೀಳಿರುವ, ಹಲ್ಲು ಮುರಿದಿರುವ ಭೀಕರ ಸ್ಥಿತಿಯಲ್ಲಿ ಎಂಟು ವರ್ಷದ ಬಾಲಕಿಯ ಶವವೊಂದು ಪತ್ತೆಯಾಗಿದ್ದು, ಅತ್ಯಾಚಾರವೂ ನಡೆದಿರುವ ಕುರಿತು ಶಂಕೆ ಕೂಡ ವ್ಯಕ್ತವಾಗಿದೆ. ಹೀಗೊಂದು ರೀತಿಯಲ್ಲಿ ಕಳೇಬರ ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ಕೋಲ್ಕತದ ಜೋರಾಬಗನ್ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಈ ಶವ ಪತ್ತೆಯಾಗಿದೆ. ಆರೋಪಿಗಳ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಕಲೆಹಾಕಿ ಸುಳಿವು ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಲಕಿ ಸೋವಾಬಜಾರ್ ಎಂಬ ಪ್ರದೇಶದ ನಿವಾಸಿ. ಶವದ ಮೇಲಿನ ಬಟ್ಟೆಗಳು ಹರಿದುಹೋಗಿದ್ದು, ಕತ್ತು ಸೀಳಲಾಗಿದೆ, ಹಲ್ಲು ಮುರಿಯಲಾಗಿದೆ. ದೇಹ ಪತ್ತೆಯಾದ ಸ್ಥಿತಿ ಹಾಗೂ ಸಂಬಂಧಿತ ಲಕ್ಷಣಗಳನ್ನು ಗಮನಿಸಿರುವ ಪೊಲೀಸರು ಅತ್ಯಾಚಾರ ಕೂಡ ನಡೆದಿರುಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಪಟ್ಟಿರುವ ಬಾಲಕಿ ಆಕೆಯ ಪಾಲಕರ ಮೂವರು ಮಕ್ಕಳಲ್ಲಿ ಕಿರಿಯವಳು. ಮೂರನೇ ಕ್ಲಾಸ್​ನ ಈ ಬಾಲಕಿ ಜೋರಾಬಗನ್​ನಲ್ಲಿರುವ ಅಜ್ಜಿ ಮನೆಗೆ ತನ್ನ ಇಬ್ಬರು ಸಹೋದರಿಯರೊಂದಿಗೆ ಬುಧವಾರ ತೆರಳಿದ್ದಳು. ಬೇರೆ ಮಕ್ಕಳೊಂದಿಗೆ ರಸ್ತೆಯಲ್ಲಿ ಆಡುತ್ತಿದ್ದ ತಂಗಿಯನ್ನು ರಾತ್ರಿ 7.45ಕ್ಕೆ ಕೊನೆಯದಾಗಿ ಕಂಡಿದ್ದಾಗಿ ಸಹೋದರಿಯರು ಹೇಳಿದ್ದಾರೆ. ಎಂಟು ಗಂಟೆ ಹೊತ್ತಿಗೆ ಆಕೆ ಎಲ್ಲಿಯೂ ಕಾಣದಿದ್ದಾಗ ಹುಡುಕಾಡಿದೆವು, ಆದರೆ ಅವಳು ಅಷ್ಟರಲ್ಲಾಗಲೇ ನಾಪತ್ತೆಯಾಗಿದ್ದಳು, ಏನಾಯಿತು ಎಂಬುದು ಗೊತ್ತಾಗಿಲ್ಲ ಎಂಬುದಾಗಿ ಮನೆಯವರು ಮಾಹಿತಿ ನೀಡಿದ್ದಾರೆ.

TRENDING