Tuesday, March 9, 2021
Home ಸಿನಿಮಾ ಸಿಂಬು ಚಿತ್ರಕ್ಕೆ ಶೀರ್ಷಿಕೆ ಬದಲಾವಣೆ

ಇದೀಗ ಬಂದ ಸುದ್ದಿ

ಸಿಂಬು ಚಿತ್ರಕ್ಕೆ ಶೀರ್ಷಿಕೆ ಬದಲಾವಣೆ

ತಮಿಳು ಮೂಲದ ಒಂದು ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಯಲ್ಲಿ ತಯಾರಾಗುತ್ತಿದೆ.
ಚಿತ್ರದ ಹೆಸರು ಮಾನಾಡು..

ಆದರೆ ಈ ಚಿತ್ರಕ್ಕೆ ಶೀರ್ಷಿಕೆ ಗೊಂದಲ ಏರ್ಪಟ್ಟಿದೆ. ಹಾಗಾಗಿ ಕನ್ನಡ ಅವತರಣಿಕೆಯ ಹೆಸರು ಬದಲಾವಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸಿಂಬು ನಟನೆಯ ಈ ಚಿತ್ರಕ್ಕೆ ಕನ್ನಡದಲ್ಲಿ ರಿವೈಂಡ್ ಎಂಬ ಹೆಸರನ್ನು ಇಡಲಾಗಿತ್ತು. ಆದರೆ ಕನ್ನಡದಲ್ಲಿ ಇದೇ ಹೆಸರಿನ ಬೇರೊಂದು ಚಿತ್ರ ನಿರ್ಮಾಣ ಹಂತದಲ್ಲಿ ಇರುವುದರಿಂದ ಶೀರ್ಷಿಕೆ ಬದಲಾಗಲಿದೆ..

ಅಂದ ಹಾಗೆ ಈ ಚಿತ್ರದ ಟೀಸರ್‌ನ್ನು ಕಿಚ್ಚ ಸುದೀಪ್ ಈಚೆಗೆ ಬಿಡುಗಡೆಗೊಳಿಸಿದ್ದರು. ಇದೇ ವೇಳೆ ಶೀರ್ಷಿಕೆ ಅನಾವರಣಗೊಂಡಿತ್ತು. ಆದರೀಗ ಬೇರೊಂದು ಕನ್ನಡ ಚಿತ್ರ ಇದೇ ಶೀರ್ಷಿಕೆ ಹೊಂದಿರುವುದರಿಂದ ಎಲ್ಲಾ ಭಾಷೆಗೂ ಹೊಂದುವ ಶೀರ್ಷಿಕೆ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ..

ವೆಂಕಟ್ ಪ್ರಭು ನಿರ್ದೇಶನದ ಚಿತ್ರಕ್ಕೆ ಯುವನ್ ಶಂಕರ್ ರಾಜ ಸಂಗೀತ ನೀಡುತ್ತಿದ್ದಾರೆ.
ಸುರೇಶ್‌ಕಮತ್‌ಚಿ ಅವರು `ವಿ ಹೌಸ್ ಪ್ರೊಡಕ್ಷನ್’ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಹಾಗೂ ಇತರರಿದ್ದಾರೆ.

TRENDING