Tuesday, March 9, 2021
Home ಸಿನಿಮಾ ಗೋಪಾಲ್ ಕುಲಕರ್ಣಿ ನಿರ್ಮಾಣದ ಕಥಾ ಲೇಖನ

ಇದೀಗ ಬಂದ ಸುದ್ದಿ

ಗೋಪಾಲ್ ಕುಲಕರ್ಣಿ ನಿರ್ಮಾಣದ ಕಥಾ ಲೇಖನ

ಕನ್ನಡದ ಕೆಲವು ಚಿತ್ರಗಳಲ್ಲಿ ಖಳನಟ ಹಾಗೂ ಇತರ ಪಾತ್ರಗಳನ್ನು ನಿರ್ವಹಿಸಿರುವ ಗೋಪಾಲ ಕುಲಕರ್ಣಿ ಅವರು ಮತ್ತೊಂದು ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅವರೇ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜಿ.ಕೆ.ಎಂಟಟೈನ್ಮೆಂಟ್ ಅಡಿಯಲ್ಲಿ ಗೋಪಾಲ ಕುಲಕರ್ಣಿ ಅವರು ನಿರ್ಮಿಸಿ ನಟಿಸಿರುವ ಈ ಚಿತ್ರಕ್ಕೆ ರವಿ ಮಹಾದೇವ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಈ ಚಿತ್ರದ ಶೀರ್ಷಿಕೆಯನ್ನು ಈಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ `ಕಥಾ ಲೇಖನ’ ಎಂದು ಹೆಸರಿಡಲಾಗಿದೆ.ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ.

ಅಂದ ಹಾಗೆ ಈ ಚಿತ್ರವನ್ನು ಸತ್ಯ ರತ್ನಂ ನಿರ್ದೇಶನ ಮಾಡುತ್ತಿದ್ದಾರೆ. ಸಾಮ್ ಛಾಯಾಗ್ರಹಣ, ಕರಣಂ ಶ್ರೀ ರಾಘವೇಂದ್ರ ಸಂಗೀತ ಚಿತ್ರಕ್ಕಿದೆ.

ಕನ್ನಡದ ಖ್ಯಾತ ಗಾಯಕಿ ಅನುರಾಧ ಭಟ್ ಎರಡು ಗೀತೆಗಳನ್ನು ಹಾಡಿದ್ದು, ಹರ್ಷವರ್ಧನ ಹೆಗಡೆ ನಿಟ್ಟೂರು ಸಾಹಿತ್ಯ ಒದಗಿಸಿದ್ದಾರೆ.

ಗೋಪಾಲ ಕುಲಕರ್ಣಿ ಸೇರಿದಂತೆ ಅರ್ಫಾತ್, ನಾಗೇಂದ್ರ ಅರಸ್, ಚಂದ್ರಪ್ರಭ, ಜಗ್ಗಪ್ಪ, ಪಲ್ಟಿ ಗೋವಿಂದ, ಲ್ಯಾಗ್ ಮಂಜು, ಸಂತು ಅರುಣ್ ಕುಮಾರ್, ಪ್ರಶಾಂತ್ ಶೆಟ್ಟಿ,ರಾಜೇಶ್ವರಿ ಪಾಂಡೆ ನಟಿಸಿದ್ದಾರೆ.

ಎರಡನೇ ಹಂತದ ಚಿತ್ರೀಕರಣಕ್ಕೆ ಭರದ ಸಿದ್ಧತೆ ನಡೆದಿದ್ದು, ಹೆಸರಾಂತ ತಾರಾಗಣ ಇದರಲ್ಲಿ ಪಾಲ್ಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

TRENDING