Tuesday, March 9, 2021
Home ಸಿನಿಮಾ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಈಗ ಕನ್ನಡ ಕಲಾ ತಿಲಕ..

ಇದೀಗ ಬಂದ ಸುದ್ದಿ

ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ಈಗ ಕನ್ನಡ ಕಲಾ ತಿಲಕ..

ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲಿಫಾ ಮೇಲೆ ಕನ್ನಡದ ಬಾವುಟ ಹಾರಿಸಿ ತಮ್ಮ ೨೫ ವರ್ಷಗಳ ಸಿನಿಮಾ ಯಾನವನ್ನು ಮೆಲುಕು ಹಾಕಿದ ನಟ ಕಿಚ್ಚ ಸುದೀಪ್ ಅವರಿಗೆ ದುಬೈನಲ್ಲಿ ಕನ್ನಡದ ಸಂಘಟನೆಗಳು ‘ಕನ್ನಡ ಕಲಾ ತಿಲಕ’ ಎಂಬ ಬಿರುದು ನೀಡಿವೆ..

ತಮ್ಮ ೨೫ ವರ್ಷಗಳ ಸಿನಿಮಾ ಪಯಣವನ್ನು ವಿನೂತನವಾಗಿ ಆಚರಿಸಿಕೊಳ್ಳುವುದರ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ವರ್ಷದ ದೇಶ ವಿದೇಶಗಳಲ್ಲಿ ಹಾರಿಸಿದ್ದಾರೆ. ಅವರ ವಿಕ್ರಾಂತ್ ರೋಣ ಚಿತ್ರದ ಪ್ರಚಾರವೂ ಇದರಲ್ಲಿ ಸೇರಿದ್ದು ವಿಶೇಷವಾಗಿತ್ತು ಎಂದು ಅನಿವಾಸಿ ಭಾರತೀಯ ಸಂಘಟನೆಗಳು ಕೊಂಡಾಡಿವೆ.

ಕಳೆದ ಫೆಬ್ರವರಿ ಒಂದರಂದು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕನ್ನಡಿಗರು ಮಾಡಿದ ಸನ್ಮಾನವನ್ನು ಕಿಚ್ಚ ಸುದೀಪ್ ಪ್ರೀತಿಯಿಂದ ಸ್ವೀಕರಿಸಿದರು.

ಇದೇ ವೇಳೆ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರ ಸಂದೇಶಗಳೊಂದಿಗೆ ಕಿಚ್ಚ ಸುದೀಪ್ ಅವರ ೨೫ ವರ್ಷಗಳ ಸಾಧನೆಗಳನ್ನು ಅಭಿನಂದಿಸಿ ‘ಕನ್ನಡ ಕಲಾ ತಿಲಕ’ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

TRENDING