Tuesday, March 9, 2021
Home ಸಿನಿಮಾ ಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದ ಸರ್ಕಾರ :ಚಿತ್ರಮಂದಿರ ಭರ್ತಿ ಕುರಿತ ಚರ್ಚೆಗೆ ಸಿನಿ ದಿಗ್ಗಜರ ಸಭೆ...

ಇದೀಗ ಬಂದ ಸುದ್ದಿ

ಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದ ಸರ್ಕಾರ :ಚಿತ್ರಮಂದಿರ ಭರ್ತಿ ಕುರಿತ ಚರ್ಚೆಗೆ ಸಿನಿ ದಿಗ್ಗಜರ ಸಭೆ ಕರೆದ ಸಚಿವ ಸುಧಾಕರ್

ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ನೀಡಬೇಕು ಎಂದು ಕೋರಿ ಕನ್ನಡ ಸಿನಿಮಾ ರಂಗದ ದಿಗ್ಗಜರು ಇಂದು ಸಂಜೆ 5 ಗಂಟೆಗೆ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ವಿಧಾನ ಸೌಧದಲ್ಲಿ ಇಂದು ಸಂಜೆ 5 ಗಂಟೆಗೆ ಆರೋಗ್ಯ ಸಚಿವರ ಕೆ. ಸುಧಾಕರ್‌ ಅವ್ರು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹಿರಿಯ ನಟರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್‌ ಚೆಂಬರ್‌ ಅಧ್ಯಕ್ಷ್ಯ ಪದಾಧಿಕಾರಿಗಳು ಸೇರಿದಂತೆ ಚಿತ್ರೋದ್ಯಮದ ಸದಸ್ಯರೊಂದಿಗೆ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವ್ರು ಸಭೆ ನಡೆಸಲಿದ್ದಾರೆ.

ಅಂದ್ಹಾಗೆ, ರಾಜ್ಯ ಸರ್ಕಾರ ನಿನ್ನೆಯಷ್ಟೇ ಮಾರ್ಗಸೂಚಿ ಹೊರಡಿಸಿದ್ದು, ಫೆಬ್ರವರಿ 28ರವೆಗೆ 50ರಷ್ಟು ಮಾತ್ರ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದೆ. ಈ ನೀತಿಗೆ ಸಿನಿ ದಿಗ್ಗಜರು ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

TRENDING