Tuesday, March 9, 2021
Home ಸಿನಿಮಾ ಚಿತ್ರಮಂದಿರಗಳಲ್ಲಿ ಶೇ.100 % ರಷ್ಟು ಪ್ರೇಕ್ಷಕರ ಭರ್ತಿಗೆ ಅನುಮತಿ : ಸರ್ಕಾರಕ್ಕೆ ನಟ 'ಶಿವರಾಜ್ ಕುಮಾರ್'...

ಇದೀಗ ಬಂದ ಸುದ್ದಿ

ಚಿತ್ರಮಂದಿರಗಳಲ್ಲಿ ಶೇ.100 % ರಷ್ಟು ಪ್ರೇಕ್ಷಕರ ಭರ್ತಿಗೆ ಅನುಮತಿ : ಸರ್ಕಾರಕ್ಕೆ ನಟ ‘ಶಿವರಾಜ್ ಕುಮಾರ್’ ಧನ್ಯವಾದ

 ಬೆಂಗಳೂರು : ಚಿತ್ರಮಂದಿರಗಳಲ್ಲಿ 100 % ರಷ್ಟು ಪ್ರೇಕ್ಷಕರ ಭರ್ತಿಗೆ ರಾಜ್ಯಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.

ಸಚಿವ ಸುಧಾಕರ್ ಅವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್ ‘ನಾವು ನಮ್ಮ ಸಮಸ್ಯೆ ಹೇಳಿಕೊಂಡಾಗ ಸಚಿವರು ಕೂಡ ಸ್ಪಂದಿಸಿದ್ದಾರೆ ಎಂದರು.

ಅವರು ನಮಗೆ ನಾಲ್ಕು ವಾರ ಟೈಮ್ ನೀಡಿದ್ದಾರೆ. ಇದು ನಮಗೊಂದು ಚಾಲೆಂಜ್, ಸರ್ಕಾರ ನಮ್ಮ ಮೇಲೆ ಜವಾಬ್ದಾರಿ ಹಾಕಿದೆ. ನಮ್ಮ ಸಿನಿಮಾ ಅಭಿಮಾನಿಗಳು ನಮಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ, ಇದಕ್ಕೆ ಅವಕಾಶ ಮಾಡಿಕೊಟ್ಟ ಸಿಎಂ ಗೆ ಧನ್ಯವಾದಗಳು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

TRENDING