Saturday, March 6, 2021
Home ದೆಹಲಿ ದೆಹಲಿಯಲ್ಲಿ ರೈತರ ಉಗ್ರ ಪ್ರತಿಭಟನೆ : ಟ್ರ್ಯಾಕ್ಟರ್‌ ಮಗುಚಿ ಒಬ್ಬ ರೈತ ಸಾವು

ಇದೀಗ ಬಂದ ಸುದ್ದಿ

ದೆಹಲಿಯಲ್ಲಿ ರೈತರ ಉಗ್ರ ಪ್ರತಿಭಟನೆ : ಟ್ರ್ಯಾಕ್ಟರ್‌ ಮಗುಚಿ ಒಬ್ಬ ರೈತ ಸಾವು

ನವದೆಹಲಿ: ಸರ್ಕಾರದ ಹೊಸ ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ಸಾವಿರಾರು ರೈತರು ಗಣರಾಜ್ಯೋತ್ಸವದಂದು ದೆಹಲಿಯ ಗಡಿಭಾಗದಲ್ಲಿ ಬ್ಯಾರಿಕೇಡ್ ಗಳನ್ನು ಒಡೆದು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದು, ಸ್ಥಳದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿದೆ. ಈ ಗೊಂದಲದ ನಡುವೆಯೇ ಪ್ರತಿಭಟನಾಕಾರರನ್ನು ಚದುರಿಸಲುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾಕಾರರು – ಬೆಳಗ್ಗೆ 12 ರಿಂದ 5 ಸಂಜೆ ರ ನಡುವೆ ‘ಕಿಸಾನ್ ಪರೇಡ್’ ನಡೆಸಲು ಅನುಮತಿ ನೀಡಿದ ನಂತರ ಈ ಘರ್ಷಣೆಗೆ ಕಾರಣವಾಯಿಗಿದೆ ಎನ್ನಲಾಗಿದೆ.

ಈ ನಡುವೆ ದೆಹಲಿಯ ಐಟಿಒದಲ್ಲಿ ಟ್ರ್ಯಾಕ್ಟರ್‌ ಮಗುಚಿ ರೈತರೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರ ಮಾಹಿತಿಯನ್ನು ನಿರಾಕರಣೆ ಮಾಡಿರುವ ಪ್ರತಿಭಟನಾಕಾರರು ಗುಂಡು ಹಾರಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದು, ಕೆಲ ರೈತರು ಪೊಲೀಸರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಆರೋಪ ಕೂಡ ಕೇಳಿ ಬಂದಿದೆ.

TRENDING